ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಮೆರಿಕೆಗೆ ಅನಿಲ ಸರಬರಾಜು: ರಿಲಯನ್ಸ್ ಯೋಜನೆ (Reliance Industries | Energy major | India | United States | Sell gas)
Bookmark and Share Feedback Print
 
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್,ಅಮೆರಿಕದ ಚಿಲ್ಲರೆ ವಹಿವಾಟುದಾರರಿಗೆ ಅನಿಲವನ್ನು ಮಾರಾಟ ಮಾಡಲು ಯೋಜನೆಯನ್ನು ರೂಪಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರಿಲಯನ್ಸ್ ಸಂಸ್ಥೆ, ಅಟ್ಲಾಸ್ ಎನರ್ಜಿಯೊಂದಿಗೆ ಜಂಟಿ ಸಹಭಾಗಿತ್ವ ಹೊಮದಿದ್ದು,ಅಮೆರಿಕದ ತೈಲ ಕಂಪೆನಿಗಳು ಸ್ಥಾಪಿಸಿದ ಕೊಳವೆಗಳ ಮೂಲಕ ಅನಿಲ ಸರಬರಾಜು ಮಾಡುವ ಗುರಿಯನ್ನು ಹೊಂದಿದೆ.

ಮುಕೇಶ್ ಅಂಬಾನಿ ಸಂಚಾಲಿತ ರಿಲಯನ್ಸ್ , ಆರಂಭದಲ್ಲಿ ಅನಿಲವನ್ನು ನ್ಯೂಯಾರ್ಕ್ ಮತ್ತು ವರ್ಜಿನಿಯಾ ನಗರಗಳ ಗ್ರಾಹಕರಿಗೆ ಸರಬರಜಾು ಮಾಡುವ ಉಧ್ದೇಶವಿದ್ದು, ಸಹಭಾಗಿತ್ವ ಕಂಪೆನಿಯಾದ ಅಟ್ಲಾಸ್ ಎನರ್ಜಿಯನೆರವು ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಅಮೆರಿಕಕ್ಕೆ ಅನಿಲ ಸರಬರಾಜು ಮಾಡುವ ಯೋಜನೆ ಕುರಿತಂತೆ, ವಿವರಣೆ ನೀಡಲು ರಿಲಯನ್ಸ್ ವಕ್ತಾರರು ನಿರಾಕರಿಸಿದ್ದಾರೆ.

ರಿಲಯನ್ಸ್ ಕಂಪೆನಿ, ಅಟ್ಲಾಸ್‌ನ ಶೇ.40ರಷ್ಟು ಶೇರುಗಳನ್ನು ಖರೀದಿಸಿದ್ದು,ಪೆನಿಸಿಲ್ವೆನಿಯಾ, ಪಶ್ಚಿಮ ವರ್ಜಿನಿಯಾ ಮತ್ತು ಅಮೆರಿಕದ ನ್ಯೂಯಾರ್ಕ್‌ಗಳಲ್ಲಿ ಅನಿಲ ಉತ್ಪಾದನಾ ಯೋಜನೆಗಳನ್ನು ಆರಂಭಿಸುವ ಗುರಿಯನ್ನು ಹೊಂದಲಾಗಿದ್ದು, ಹಲವು ದಶಕಗಳವರೆಗೆ ಅಮೆರಿಕದ ಅನಿಲ ಅಗತ್ಯತೆಯನ್ನು ಪೂರೈಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ