ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಜೀಂ ಪ್ರೇಮ್‌ಜೀ ಭಾರತ ಬಿಲ್ ಗೇಟ್ಸ್: ಫೋರ್ಬ್ಸ್ (Azim Premji | Bill Gates | India | Forbes)
Bookmark and Share Feedback Print
 
ಸಾಫ್ಟ್‌ವೇರ್ ಜಗತ್ತಿನ ಪ್ರಭಾವಿ ಉದ್ಯಮಿ ಹಾಗೂ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜೀ ಅವರು ಭಾರತದ ಬಿಲ್ ಗೇಟ್ಸ್ ಎಂದು ಅಮೆರಿಕಾದ ವಾಣಿಜ್ಯ ಮ್ಯಾಗಜಿನ್ ಫೋರ್ಬ್ಸ್ ಹೇಳಿಕೊಂಡಿದೆ.

ಶಿಕ್ಷಕರಿಗಾಗಿ ವಿಶ್ವದರ್ಜೆಯ ಯೂನಿವರ್ಸಿಟಿ ನಿರ್ಮಾಣ ಮಾಡಲು ಯೋಜನೆ ಇರಿಸಿಕೊಂಡಿರುವ ಪ್ರೇಮ್ ಜೀ, ಆ ಮೂಲಕ ಭಾರತದ 600ರಷ್ಟು ಜಿಲ್ಲೆಗಳಲ್ಲಿ ಶಿಕ್ಷಕರ ತರಬೇತಿ ಕೇಂದ್ರವನ್ನು ತೆರೆಯುವ ಉದ್ದೇಶ ಹೊಂದಿರುವುದಾಗಿ ಪತ್ರಿಕೆಗೆ ವಿವರಿಸಿದ್ದಾರೆ.

ವಿದ್ಯಾಭ್ಯಾಸವನ್ನು ದೃಷ್ಟಿಯಲ್ಲಿರಿಸಿಕೊಂಡಿರುವ ಅಜೀಂ ಪ್ರೇಮ್ ಜೀ ಫೌಂಡೇಷನ್‌ನ ಅತಿ ನೂತನ ಯೋಜನೆಯಾಗಿದ್ದು, ಆ ಮೂಲಕ ಶಿಕ್ಷಕರ ತರಬೇತಿ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಇರಾದೆಯಿರಿಸಿಕೊಂಡಿರುವುದಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ ರೀತಿಯಲ್ಲಿಯೇ ಪ್ರೇಮ್ ಜೀ ತನ್ನ ಜೀವಮಾನದ ಸಂಪಾದನೆಯನ್ನು ಸಮಾಜದ ಏಳಿಗೆಗಾಗಿ ಉಪಯೋಗಿಸಲು ಮುಂದಾಗಿದ್ದಾರೆ ಎಂದು ಅಮೆರಿಕಾದ ಫೋರ್ಬ್ಸ್ ಮ್ಯಾಗಜಿನ್ ವರದಿ ಮಾಡಿದೆ.

ತನ್ನ ಸಂಪತ್ತಿನ ಅಲ್ಪ ಭಾಗವನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೀಸಲಿಟ್ಟಲ್ಲಿ ಅದೊಂದು ಜೀವನದ ಮಹತ್ತರ ಸಾಧನೆಯಾಗಲಿದೆ ಎಂಬ ಪ್ರೇಮ್ ಜೀ ಹೇಳಿಕೆಯನ್ನು ನಿಯತಕಾಲಿಕ ಉಲ್ಲೇಖಿಸಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ