ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿಜಯಾ ಬ್ಯಾಂಕ್: 1 ಲಕ್ಷ ಕೋಟಿ ವ್ಯವಹಾರ (Vijaya Banka | Bangalore | Karnataka)
Bookmark and Share Feedback Print
 
ಸರ್ಕಾರಿ ಸ್ವಾಮ್ಯದ ವಿಜಯಾ ಬ್ಯಾಂಕ್ ಪ್ರಸಕ್ತ ವರ್ಷ ಒಂದು ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯಾ ಬ್ಯಾಂಕಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆಲ್ಬರ್ಟ್ ಟವರೊ, ವ್ಯಾಪಾರ ವಹಿವಾಟಿನ ವಿವರಗಳನ್ನು ಪ್ರಕಟಿಸಿದರು.

ಜನವರಿ, ಮಾರ್ಚ್ ಅವಧಿಯಲ್ಲಿ 130.92ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದ ಅವರು, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಗಳಿಸಿದ 102 ಕೋಟಿ ರೂಪಾಯಿಗೆ ಹೋಲಿಸಿದರೆ ಶೇ.28ರಷ್ಟು ಹೆಚ್ಚಳವಾಗಿದೆ ಎಂದರು.

ಬ್ಯಾಂಕಿನ ಒಟ್ಟು ವರಮಾನ 1,511,67 ಕೋಟಿ ರೂಪಾಯಿ ತಲುಪಿದ್ದು, ಹಿಂದಿನ ವರ್ಷದ ವರಮಾನ 1,622.38 ಕೋಟಿ ರೂಪಾಯಿಗೆ ಹೋಲಿಸಿದರೆ ವರಮಾನ ವಿಷಯದಲ್ಲಿ ಕಡಿಮೆಯಾಗಿರುವುದಾಗಿ ತಿಳಿಸಿದರು.

ಒಟ್ಟಾರೆ ವರ್ಷದ ಲೆಕ್ಕದಲ್ಲಿ ನೋಡಿದರೆ 2009-10ನೇ ಸಾಲಿನಲ್ಲಿ ಬ್ಯಾಂಕಿನ 507.29 ಕೋಟಿ ರೂಪಾಯಿ ನಿವ್ವಳ ಲಾಭವಾಗಿದೆ. 2008-09ನೇ ಸಾಲಿಗೆ ಹೋಲಿಸಿದರೆ ಶೇ.93ರಷ್ಟು ಹೆಚ್ಚಳವಾಗಿದೆ. ಈ ಅವಧಿಯಲ್ಲಿ 262.48 ಕೋಟಿ ನಿವ್ವಳ ಲಾಭ ಬಂದಿತ್ತು ಎಂದರು.
ಸಂಬಂಧಿತ ಮಾಹಿತಿ ಹುಡುಕಿ