ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐಸಿಐಸಿಐ, ಎಚ್‌ಡಿಎಫ್‌ಸಿಗಳಿನ್ನು ಭಾರತೀಯ ಕಂಪನಿಗಳಲ್ಲ (ICICI Bank | HDFC Ltd | HDFC Bank | RP Singh)
Bookmark and Share Feedback Print
 
ಇದುವರೆಗೆ ಭಾರತೀಯ ಕಂಪನಿಗಳೆನಿಸಿಕೊಂಡಿದ್ದ ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಲಿಮಿಟೆಡ್, ಎಚ್‌ಡಿಎಫ್‌ಸಿ ಬ್ಯಾಂಕ್ ಮುಂತಾದ ಸಂಸ್ಥೆಗಳು ವಿದೇಶಿ ನೇರ ಹೂಡಿಕೆ ನಿಯಮಾವಳಿಗಳ ಪ್ರಕಾರ ಇನ್ನು ತುಂಬಾ ದಿನ ಭಾರತೀಯ ಕಂಪನಿಗಳೆಂದು ಕರೆಸಿಕೊಳ್ಳುವಂತಿಲ್ಲ.

ಇದನ್ನು ಸ್ಪಷ್ಟಪಡಿಸಿರುವುದು ವಾಣಿಜ್ಯ ನೀತಿ ಮತ್ತು ಪ್ರಗತಿ ಇಲಾಖೆಯ ಕಾರ್ಯದರ್ಶಿ ಆರ್.ಪಿ. ಸಿಂಗ್. ಅಂತಹಾ ಕಂಪನಿಗಳನ್ನು ಇನ್ನು ಭಾರತೀಯರ ನಿಯಂತ್ರಣದಲ್ಲಿರುವ ಬ್ಯಾಂಕುಗಳು ಅಥವಾ ಸಂಸ್ಥೆಗಳು ಎಂದು ಕರೆಯಬಹುದು ಎಂದು ಅವರು ತಿಳಿಸಿದ್ದಾರೆ.

ಅದೇ ಹೊತ್ತಿಗೆ ವಿಮಾ ಕಂಪನಿಗಳಲ್ಲಿ ಶೇ.76ರಷ್ಟು ಶೇರನ್ನು ಹೊಂದಲು ಭಾರತೀಯ ಕಂಪನಿಗಳಿಗೆ ಅವಕಾಶ ನೀಡಲಾಗಿದೆ. ಇಲ್ಲಿ ಶೇ.26ಕ್ಕಿಂತ ಹೆಚ್ಚು ಪಾಲನ್ನು ವಿದೇಶಿ ಕಂಪನಿಗಳು ಅಥವಾ ವ್ಯಕ್ತಿಗಳು ಹೊಂದುವಂತಿಲ್ಲ.

ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿಗಳಲ್ಲಿ ನೇರ ಮತ್ತು ಪರೋಕ್ಷ ವಿದೇಶಿ ಬಂಡವಾಳ ಕ್ರಮವಾಗಿ ಶೇ.67 ಮತ್ತು ಶೇ.73ರಷ್ಟಿವೆ. ಇವೆರಡೂ ಕಂಪನಿಗಳನ್ನು ಪ್ರಸಕ್ತ ಭಾರತೀಯ ಸಂಸ್ಥೆಗಳೆಂದು ಪರಿಗಣಿಸಲಾಗುತ್ತಿದೆ. ಆದರೆ ಎಚ್‌ಡಿಎಫ್‌ಸಿ ಲಿಮಿಟೆಡ್ ಕಂಪನಿಯು ಭಾರತೀಯ ಸಂಸ್ಥೆಯಲ್ಲ. ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಶೇ.23.7ರ ಪಾಲು ಹೊಂದಿರುವ ಇದನ್ನು ವಿದೇಶಿ ನಿಯಂತ್ರಿತ ಸಂಸ್ಥೆ ಎಂದೇ ಪರಿಗಣಿಸಲಾಗುತ್ತದೆ. ಇದರಿಂದಾಗಿ ಎಚ್‌ಡಿಎಫ್‌ಸಿ ಬ್ಯಾಂಕಿನ ಒಟ್ಟಾರೆ ವಿದೇಶಿ ಪಾಲು ಶೇ.69ಕ್ಕೂ ಹೆಚ್ಚೆನಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ