ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರೂಪಾಯಿ ಮೌಲ್ಯ 16 ಪೈಸೆ ಕುಸಿತ (The Indian Rupee | Forex | Dollar)
Bookmark and Share Feedback Print
 
ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 16 ಪೈಸೆಗಳಷ್ಟು ಕುಸಿದಿದ್ದು ಪ್ರತಿ ಡಾಲರ್‌ಗೆ 44.52 ರೂಪಾಯಿಗಳು ದಾಖಲಾಗಿದೆ. ವಿದೇಶೀ ಬಂಡವಾಳಗಳ ಹೊರಹರಿವು ಈ ದುರ್ಬಲ ಸ್ಥಿತಿಗೆ ಕಾರಣವಾಗಿದೆ.

ಈ ಮೊದಲು ಡಾಲರ್ ಎದುರು 44.36 ರೂಪಾಯಿಗಳನ್ನು ದಾಖಲಿಸಿದ್ದ ಭಾರತೀಯ ರೂಪಾಯಿ 15 ಪೈಸೆಗಳಷ್ಟು ಸದೃಢಗೊಂಡು ಎರಡು ವಾರಗಳಲ್ಲೇ ಉತ್ತಮ ಸ್ಥಿತಿ ಕಂಡಿತ್ತು.

ಫಾರೆಕ್ಸ್ ಮೂಲಗಳ ಪ್ರಕಾರ ಬಂಡವಾಳಗಳ ಹೊರಹರಿವು ಹಾಗೂ ಏಷ್ಯನ್ ಕರೆನ್ಸಿಗಳ ಎದುರು ಡಾಲರ್ ಮೌಲ್ಯವರ್ಧನೆ ರೂಪಾಯಿಯ ಕುಸಿತಕ್ಕೆ ಕಾರಣವಾಗಿದೆ.

ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕವೂ ಈ ದಿನದ ವಹಿವಾಟಿನ ಆರಂಭಿಕ ವಹಿವಾಟಿನಲ್ಲಿ 140 ಪಾಯಿಂಟ್‌ಗಳಷ್ಟು ಕುಸಿದಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೂಪಾಯಿ, ಫಾರೆಕ್ಸ್, ಡಾಲರ್