ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನಾಲ್ಕು ತಿಂಗಳಲ್ಲೇ 64 ಯುಎಸ್ ಬ್ಯಾಂಕ್ ಮುಚ್ಚುಗಡೆ (Federal Deposit Insurance Corporation | American banks)
Bookmark and Share Feedback Print
 
ಅಮೆರಿಕನ್ ಬ್ಯಾಂಕುಗಳು ಬಾಗಿಲು ಮುಚ್ಚುವ ಪ್ರಕರಣ ದಿನೇ ದಿನೇ ಹೆಚ್ಚುತ್ತಿದೆ. 2010ರಲ್ಲಿ ಈಗ ಕೇವಲ ನಾಲ್ಕು ತಿಂಗಳಲ್ಲೇ 64 ಬ್ಯಾಂಕುಗಳು ಮುಚ್ಚುಗಡೆಯಾಗಿದ್ದು, ಕೇವಲ ಏಪ್ರಿಲ್ ತಿಂಗಳೊಂದರಲ್ಲೇ 23 ಬ್ಯಾಂಕುಗಳು ಮುಳುಗಿವೆ.

2010ರಲ್ಲಿ ಮುಚ್ಚುಗಡೆಯಾದ ಬ್ಯಾಂಕುಗಳ ಪೈಕಿ ಏಪ್ರಿಲ್ ತಿಂಗಳಲ್ಲೇ 23 ಬ್ಯಾಂಕುಗಳು ಮುಳುಗಿರುವುದು ಈ ವರ್ಷದಲ್ಲಿ ಮುಳುಗಡೆಯಾದ ಪೈಕಿ ಅತೀ ದೊಡ್ಡ ಸಂಖ್ಯೆಯಾಗಿದೆ. ಅಲ್ಲದೆ, ಕಳೆದ ಶುಕ್ರವಾರವೊಂದೇ ದಿನದಲ್ಲಿ ಏಳು ಬ್ಯಾಂಕುಗಳು ಬಾಗಿಲುಗಳನ್ನು ಶಾಶ್ವತವಾಗಿ ಮುಚ್ಚಿವೆ. ಇದರಿಂದಾಗಿ ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪೋರೇಶನ್ ಮೇಲೆ 7.3 ಬಿಲಿಯನ್ ಡಾಲರ್‌ಗಳಷ್ಟು ಬೃಹತ್ ಮೊತ್ತದ ಹೊರೆ ಬಿದ್ದಿದೆ.

ವೆಸ್ಟರ್ನ್ ಬ್ಯಾಂಕ್ ಪುರ್ಟೋ ರಿಕೋ, ಯೋರೋ ಬ್ಯಾಂಕ್, ಫ್ರಾಂಟಿಯರ್ ಬ್ಯಾಂಕ್, ಬಿಸಿ ಬ್ಯಾಷನಲ್ ಬ್ಯಾಂಕ್ಸ್, ಚಾಂಪಿಯನ್ ಬ್ಯಾಂಕ್, ಆರ್-ಜಿ ಪ್ರೀಮಿಯರ್ ಬ್ಯಾಂಕ್ ಆಫ್ ಪುರ್ಟೋ ರಿಕೋ, ಸಿಎಫ್ ಬ್ಯಾನ್‌ಕಾರ್ಪ್ ಬ್ಯಾಂಕುಗಳು ಈಗಷ್ಟೇ ಮುಚ್ಚುಗಡೆಯಾದ ಕೆಲವು ಬ್ಯಾಂಕುಗಳು.

ಕೇವಲ ವೆಸ್ಟರ್ನ್ ಬ್ಯಾಂಕ್ ಪುರ್ಟೋ ರಿಕೋ, ಯೋರೋ ಬ್ಯಾಂಕ್, ಫ್ರಾಂಟಿಯರ್ ಬ್ಯಾಂಕ್, ಆರ್-ಜಿ ಪ್ರೀಮಿಯರ್ ಬ್ಯಾಂಕ್ ಆಫ್ ಪುರ್ಟೋ ರಿಕೋಗಳಿಂದಾಗಿ ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪೋರೇಶನ್‌ಗೆ 5.9 ಬಿಲಿಯನ್ ಡಾಲರ್ ಬೃಹತ್ ಮೊತ್ತದ ನಷ್ಟವಾಗಿದೆ.

ಮಾರ್ಚ್ ತಿಂಗಳಲ್ಲಿ 19 ಬ್ಯಾಂಕ್‌ಗಳು ಮುಚ್ಚಿದರೆ, ಜನವರಿಯಲ್ಲಿ ಏಳು, ಫೆಬ್ರವರಿಯಲ್ಲಿ 15 ಬ್ಯಾಂಕುಗಳು ಬಾಗಿಲು ಮುಚ್ಚಿವೆ. ಕಳೆದ ವರ್ಷ 140 ಅಮೆರಿಕನ್ ಬ್ಯಾಂಕುಗಳು ಮುಳುಗಿದ್ದವು.
ಸಂಬಂಧಿತ ಮಾಹಿತಿ ಹುಡುಕಿ