ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತದಲ್ಲಿ 60 ಕೋಟಿ ಮೊಬೈಲ್ ಗ್ರಾಹಕರಿದ್ದಾರೆ..! (India | Trai | mobile subscriber base | Mobile)
Bookmark and Share Feedback Print
 
ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಮೊಬೈಲ್ ಗ್ರಾಹಕರ ಸಂಖ್ಯೆ ಈಗ ಭಾರತದಲ್ಲಿ 60 ಕೋಟಿಗೆ ತಲುಪಿದೆ. ಅಂದರೆ ದೇಶದ ಒಟ್ಟು ಜನತೆಯಲ್ಲಿ ಜಾತಿ, ಮತ, ಲಿಂಗ, ವಯಸ್ಸಿನ ಭೇದವಿಲ್ಲದೆ ತಲಾ ಇಬ್ಬರಲ್ಲಿ ಒಬ್ಬರು ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದಾರೆ!

ಭಾರತದಲ್ಲಿ ಮೊಬೈಲ್ ಸೇವೆಯು 1995ರಲ್ಲಿ ಜಾರಿಗೆ ಬಂದಿತ್ತು. ಇದು 15 ವರ್ಷದಲ್ಲಿ ಭಾರೀ ಕ್ರಾಂತಿಯನ್ನೇ ದೇಶದಲ್ಲಿ ಸೃಷ್ಟಿಸಿತ್ತು. ಅದೇ ನಿಟ್ಟಿನಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ 2010ರ ವೇಳೆಗೆ 558.9 ಮಿಲಿಯನ್ ತಲುಪಿದೆ ಎಂದು ದೂರವಾಣಿ ಇಲಾಖೆ (ಡಾಟ್) ಅಂದಾಜು ಮಾಡಿತ್ತು. ಆದರೆ ಈ ಗಡಿಯನ್ನು ಅವಧಿಗೂ ಮೊದಲು ಭಾರತ ಮುಟ್ಟಿದೆ. 2014ರ ವೇಳೆಗೆ ಮೊಬೈಲ್ ಗ್ರಾಹಕರ ಸಂಖ್ಯೆ 100 ಕೋಟಿ ದಾಟಲಿದೆ ಎಂದೂ ಡಾಟ್ ಹೇಳುತ್ತಿದೆ.

ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಈ ಸಂಬಂಧ ಅಧಿಕೃತ ಪ್ರಕಟಣೆಯನ್ನು ಇನ್ನೂ ಹೊರಡಿಸಿಲ್ಲ. ಆದರೂ 600 ಮಿಲಿಯನ್ ಗ್ರಾಹಕರ ಪರಿಧಿಯನ್ನು ಯಾವುದೇ ಹಂತದಲ್ಲಿಯೂ ಮೀರಬಹುದು ಎಂದು ವರದಿ ಮಾಡಿದೆ.

2010 ಮಾರ್ಚ್ ಅಂತ್ಯದ ವೇಳೆಗೆ ಭಾರತದಲ್ಲಿ ಒಟ್ಟು ಮೊಬೈಲ್ ಗ್ರಾಹಕರ ಸಂಖ್ಯೆ 584 ಮಿಲಿಯನ್. ಮಾರ್ಚ್ ಒಂದೇ ತಿಂಗಳಲ್ಲಿ 20.32 ಮಿಲಿಯನ್ ಹೊಸ ಗ್ರಾಹಕರು ಸೇರ್ಪಡೆಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ