ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐಸಿಐಸಿಐ ಬ್ಯಾಂಕ್‌ನಲ್ಲಿ 7 ಸಾವಿರ ಹೊಸ ಉದ್ಯೋಗ ಸೃಷ್ಟಿ (ICICI bank | Jobs india)
Bookmark and Share Feedback Print
 
ಐಸಿಐಸಿಐ ಬ್ಯಾಂಕ್ ಈ ವರ್ಷಾಂತ್ಯದೊಳಗೆ ಸುಮಾರು 5,000ದಿಂದ 7,000 ಮಂದಿ ಹೊಸ ಉದ್ಯೋಗಿಗಳನ್ನು ನೇಮಕಗೊಳಿಸಲು ತೀರ್ಮಾನಿಸಿದೆ ಎಂದು ಬ್ಯಾಂಕಿನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ವಿವರ ನೀಡಿರುವ ಐಸಿಐಸಿಐ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯನಿರ್ವಹಣಾಧಿಕಾರಿ ಚಂದಾ ಕೊಚ್ಛರ್, ನಾವು ಈ ವರ್ಷ ಸುಮಾರು 5,000ದಿಂದ 7,000ಗಳಷ್ಟು ಮಂದಿ ಉದ್ಯೋಗಿಗಳನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಿದ್ದೇವೆ. ಈಗಾಗಲೇ ನಾವು ನಮ್ಮ ಉದ್ಯೋಗಿಗಳಿಗೆ ಬೋನಸ್ ಹಾಗೂ ವೇತನ ಹೆಚ್ಚಳವನ್ನೂ ನೀಡಿದ್ದೇವೆ ಎಂದರು.

ಐಸಿಐಸಿಐ ಬ್ಯಾಂಕ್ ದೇಶಾದ್ಯಂತ ಶಾಖೆಗಳನ್ನು ವಿಸ್ತರಿಸಿದ ಮೊದಲ ಖಾಸಗಿ ಬ್ಯಾಂಕ್ ಎಂಬ ಮೈಲುಗಲ್ಲನ್ನು ಈಗಾಗಲೇ ನಿರ್ಮಿಸಿದೆ. ಅಷ್ಟೇ ಅಲ್ಲದೆ, ಬ್ಯಾಂಕ್ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಶಾಖೆಗಳನ್ನು ಹಾಗೂ ಎಟಿಎಂಗಳನ್ನು ಈ ಹಣಕಾಸು ವರ್ಷದಲ್ಲಿ ತೆರೆಯುವ ಯೋಜನೆ ರೂಪಿಸಲಾಗಿದೆ ಎಂದು ಕೊಚ್ಛರ್ ತಿಳಿಸಿದರು.

ಇದೇ ಸಂದರ್ಭ ಬ್ಯಾಂಕಿನ ಭಾರತೀಯ ಮೂಲದ ಅಸ್ತಿತ್ವದ ವಿವಾದದ ಹಿನ್ನೆಲೆಯಲ್ಲಿ ಮಾತನಾಡಿದ ಕೊಚ್ಛರ್, ಐಸಿಐಸಿಐ ಬ್ಯಾಂಕ್ ಸಂಪೂರ್ಣ ಭಾರತೀಯ ಮೂಲದ ಬ್ಯಾಂಕ್ ಆಗಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧೀನಕ್ಕೇ ಒಳಪಟ್ಟಿರುತ್ತದೆ. ನಮ್ಮ ಬ್ಯಾಂಕಿನ ಒಡೆತನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ