ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಾಫಿ ರಫ್ತು ವಹಿವಾಟು; ಶೇ.42ಕ್ಕೆ ನೆಗೆತ (coffee | export | India | Asia)
Bookmark and Share Feedback Print
 
ಜಾಗತಿಕವಾಗಿ ಕಂಡುಬರುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಏಷ್ಯಾದ ಮೂರನೇ ಅತಿ ದೊಡ್ಡ ಕಾಫಿ ಉತ್ಪಾದಕ ರಾಷ್ಟ್ರವಾಗಿರುವ ಭಾರತದಿಂದ 2010ರ ಅವಧಿಯ ಮೊದಲ ನಾಲ್ಕು ತಿಂಗಳಲ್ಲಿ 1,00,574 ಟನ್ ಬೆಳೆಯನ್ನು ರಫ್ತು ಮಾಡಲಾಗಿದೆ ಎಂದು ಭಾರತ ಕಾಫಿ ಮಂಡಳಿ ತಿಳಿಸಿದೆ.

ಅಂದರೆ ಜನವರಿ-ಏಪ್ರಿಲ್ ತಿಂಗಳ ಅವಧಿಯಲ್ಲಿ ಕಾಫಿ ರಫ್ತು ಮಾಡುವ ಮೂಲಕ ಭಾರತ 1,025 ಕೋಟಿ ರೂಪಾಯಿ ಆದಾಯ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 763.38 ಕೋಟಿ ರೂಪಾಯಿಗಳಾಗಿತ್ತು.

ವಿಭಿನ್ನ ರೀತಿಯ ಕಾಫಿ ಬೆಳೆಗಳ ಬೇಡಿಕೆಯಲ್ಲಿ ಏರಿಕೆ ಕಂಡುಬಂದಿರುವುದೇ ರಫ್ತು ಪ್ರಮಾಣದಲ್ಲಿ ಏರಿಕೆ ಕಂಡುಬರಲು ಕಾರಣವಾಗಿದೆ ಎಂದು ಕಾಫಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಜಾಗತಿಕ ಆರ್ಥಿಕ ಬಿಕ್ಕಟ್ಟು ಕಾಫಿ ರಫ್ತನ್ನು ಕೂಡಾ ಬಾಧಿಸಿತ್ತು. ದೇಶದಿಂದ ಕಳೆದ ವರ್ಷ 70,843 ಟನ್‌ಗಳಷ್ಟೇ ಕಾಫಿ ರಫ್ತಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ