ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏಪ್ರಿಲ್ ತಿಂಗಳ ಕಾರು, ಬೈಕ್ ಮಾರಾಟದಲ್ಲಿ ಭಾರೀ ಏರಿಕೆ! (Car | Bike | India | Maruti Suzuki)
Bookmark and Share Feedback Print
 
ಉಕ್ಕು, ಕಚ್ಚಾ ತೈಲ ಬೆಲೆ ಹಾಗೂ ಬಡ್ಡಿ ದರಗಳಲ್ಲಿ ಏರಿಕೆಯಾಗುತ್ತಿದ್ದರೂ ಇದರಿಂದಾಗಿ ಕಾರು ಹಾಗೂ ಬೈಕ್ ಖರೀದಿಸುವವರ ಸಂಖ್ಯೆಯಲ್ಲೇನೂ ಕುಸಿತ ಕಂಡುಬಂದಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದಾಗ ಈ ಬಾರಿ ಏಪ್ರಿಲ್ ತಿಂಗಳಲ್ಲಿ ಕಾರು, ಬೈಕ್ ಮಾರಾಟದಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, 2010-11ರ ಆರ್ಥಿಕ ವರ್ಷವನ್ನು ಅತ್ಯುತ್ತಮವಾಗಿ ಆರಂಭಿಸಿದೆ.

ಏಪ್ರಿಲ್ ತಿಂಗಳ ಅವಧಿಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಶೇಕಡಾ 23.4 ಮತ್ತು ದೇಶದ ಎರಡನೇ ಅತೀ ದೊಡ್ಡ ಕಾರು ತಯಾರಕ ಕಂಪೆನಿ ಹುಂಡೈ ಮೋಟರ್ಸ್ ಶೇಕಡಾ 28.1ರಷ್ಟು ಮಾರಾಟದಲ್ಲಿ ಏರಿಕೆ ಕಂಡಿದೆ.

ಅದೇ ವೇಳೆ ಮಾರುಕಟ್ಟೆ ತಜ್ಞರ ವರದಿಗಳನ್ನು ಬುಡಮೇಲುಗೊಳಿಸಿರುವ ಟಾಟಾ ಮೋಟರ್ಸ್ ಪ್ರಮಾಣಿಕರ ಕಾರು ಮಾರಾಟದಲ್ಲಿ ಶೇಕಡಾ 72.27ರಷ್ಟು ಏರಿಕೆ ಕಂಡಿದೆ. ಜನರಲ್ ಮೋಟಾರ್ಸ್ ಮತ್ತು ಫೋರ್ಡ್ ಇಂಡಿಯಾ ಕಾರು ಮಾರಾಟದಲ್ಲಿಯೂ ಭಾರೀ ಏರಿಕೆ ಕಂಡಿದೆ.

ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ 2,034 ಫೋರ್ಡ್ ಇಂಡಿಯಾ ಕಾರುಗಳು ಮಾರಾಟವಾಗಿದ್ದರೆ ಅದು ಪ್ರಸಕ್ತ ವರ್ಷ 7,509ಕ್ಕೆ ಏರಿಕೆಯಾಗಿದೆ. ಅಂದರೆ ಮಾರಾಟದಲ್ಲಿ ಶೇಕಡಾ 269ರ ಭಾರೀ ಏರಿಕೆ ಕಂಡಿದೆ.

ಅದೇ ವೇಳೆ ಏಪ್ರಿಲ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿಯೂ ಏರಿಕೆ ಕಂಡಿದೆ. ಟಿವಿಎಸ್ ಮೋಟಾರ್ಸ್ ಶೇಕಡಾ 21.83, ಯಮಹಾ 11.51 ಮತ್ತು ಮಾರುತಿ ಸುಜುಕಿ ಮೋಟಾರ್ ಸೈಕಲ್ 53.22 ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಾರು, ಬೈಕ್, ಮುಂಬೈ, ಮಾರಾಟ