ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟಾಪ್ 500 ಸಿಇಒ ಪಟ್ಟಿಯಲ್ಲಿ ಭಾರತದ ಇಂದಿರಾ ನೂಯಿ (PepsiCo | Indra Nooyi, | Forbes '500 top-paid CEOs')
Bookmark and Share Feedback Print
 
ಅಮೆರಿಕದ 500 ಬೃಹತ್ ಕಂಪನಿಗಳ ಪೈಕಿ ಅತಿ ಹೆಚ್ಚು ವೇತನ ಪಡೆಯುತ್ತಿರುವವರ ಪೈಕಿ ಮೂವರು ಭಾರತೀಯ ಪೈಕಿ ಭಾರತದ ಇಂದಿರಾ ನೂಯಿ ಕೂಡಾ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್ ನಿಯತ ಕಾಲಿಕೆ ನಡೆಸುವ ಈ ಪ್ರತಿಷ್ಠಿತ ಪಟ್ಟಿಯಲ್ಲಿ ಪೆಪ್ಸಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇಂದಿರಾ ನೂಯಿ 93ನೇ ಸ್ಥಾನದಲ್ಲಿದ್ದು, ಇವರ ಒಟ್ಟು ವೇತನ 10.66 ಮಿಲಿಯನ್ ಅಮೆರಿಕನ್ ಡಾಲರ್‌ಗಳಾಗಿವೆ. 500 ಮಂದಿಯ ಪೈಕಿ ಅತೀ ಹೆಚ್ಚು ವೇತನ ಪಡೆಯುವ ಮೂಲಕ ಡಾನಾಹರ್ ಸಂಸ್ಥೆಯ ಸಿಇಒ ಎಚ್.ಲಾರೆನ್ಸ್ ಕಲ್ಪ್ 141.36 ಮಿಲಿಯನ್ ಯುಎಸ್ ಡಾಲರ್ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

ಇಂದಿರಾ ನೂಯಿ ಹೊರತು ಪಡಿಸಿದರೆ ಇನ್ನೂ ಇಬ್ಬರು ಈ ಉತ್ತುಂಗಕ್ಕೆ ತಲುಪಿದ್ದಾರೆ. ಆ ಪೈಕಿ ಕ್ವೆಸ್ಟ್ ಡಯಾಗ್ನಾಸ್ಟಿಕ್ಸ್‌ನ ಸಿಇಒ ಸೂರ್ಯ ಎನ್.ಮೋಹಪಾತ್ರ ಅವರು 96ನೇ ಸ್ಥಾನದಲ್ಲಿದ್ದರೆ, ಆಡೋಬ್ ಸಿಸ್ಟಮ್ಸ್ ಸಂಸ್ಥೆಯ ಶಾಂತನು ನಾರಾಯಣ್ ಅವರು 425ನೇ ಸ್ಥಾನದಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಿಇಒ, ಪೆಪ್ಸಿ, ಇಂದಿರಾ ನೂಯಿ