ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಚ್‌ಡಿಎಫ್‌ಸಿ ನಿವ್ವಳ ಲಾಭಾಂಶದಲ್ಲಿ ಶೇ.26 ಏರಿಕೆ (HDFC | Q4 profit | net profit | total income)
Bookmark and Share Feedback Print
 
ಸಹಕಾರಿ ಸ್ವಾಮ್ಯದ ಎಚ್‌ಡಿಎಫ್‌ಸಿ ಬ್ಯಾಂಕ್ 2010 ಮಾರ್ಚ್ 31ಕ್ಕೆ ಅಂತ್ಯಗೊಂಡ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 926.4 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆಯೆಂದು ಕಂಪೆನಿ ಪ್ರಕಟನೆಯಲ್ಲಿ ತಿಳಿಸಿದೆ.

ಕಳೆದ ವರ್ಷ ಇದೇ ಅವಧಿಗೆ ನಿವ್ವಳ ಲಾಭ 733.4 ಕೋಟಿ ರೂಪಾಯಿಗಳಾಗಿತ್ತು. ಆ ಮೂಲಕ ಶೇಕಡಾ 26ರಷ್ಟು ಏರಿಕೆ ಕಂಡಿದೆ.

ಆದರೆ ಒಟ್ಟು ಆದಾಯದಲ್ಲಿ ಶೇಕಡಾ 9.5ರ ಕುಸಿತ ಕಂಡಿದೆ. ನಾಲ್ಕನೇ ತ್ರೈಮಾಸಿಕ ಅವಧಿ ಅಂತ್ಯಕ್ಕೆ ಬ್ಯಾಂಕ್ 2,847 ಕೋಟಿ ರೂಪಾಯಿ ಆದಾಯ ಗಳಿಸಿದೆ. ಇದು ಕಳೆದ ವರ್ಷ 3,146 ಕೋಟಿ ರೂಪಾಯಿಗಳಾಗಿತ್ತು.

ಮಾರುಕಟ್ಟೆಯಲ್ಲಿನ ಬಡ್ಡಿದರದಲ್ಲಿನ ಇಳಿಕೆ ಒಟ್ಟು ಆದಾಯದ ಕುಸಿತಕ್ಕೆ ಕಾರಣವಾಗಿದೆ.

ಎಚ್‌ಡಿಎಫ್‌ಸಿ ಒಟ್ಟು ನಿವ್ವಳ ಲಾಭಂಶದಲ್ಲಿ 2010 ಮಾರ್ಚ್ ತಿಂಗಳ ಅವಧಿಯ ವೇಳೆಗೆ ಶೇಕಡಾ 24ರ ಏರಿಕೆ ಕಂಡಿದ್ದು, 2,826.5 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷ ಇದು 2,282.5 ಕೋಟಿ ರೂಪಾಯಿಗಳಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ