ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 1 ಮಿಲಿಯನ್‌ಗೆ ತಲುಪಿದ ಐ-ಪ್ಯಾಡ್‌ ಮಾರಾಟ (Apple | iPads | tablet computer | iPhone)
Bookmark and Share Feedback Print
 
ಏಪ್ರಿಲ್‌ ಮೂರರಂದು ಮಾರುಕಟ್ಟೆಗೆ ಬಂದಿದ್ದ ಟ್ಯಾಬ್ಲೆಟ್ ಕಂಪ್ಯೂಟರ್ 'ಐ-ಪ್ಯಾಡ್‌' ಭರ್ಜರಿ ಮಾರಾಟವಾಗಿದೆ ಎಂದು ಆಪಲ್ ಕಂಪನಿ ಹೇಳಿಕೊಂಡಿದ್ದು, ಇದುವರೆಗೆ 10 ಲಕ್ಷ 'ಐ-ಪ್ಯಾಡ್‌'ಗಳನ್ನು ಮಾರಾಟ ಮಾಡಲಾಗಿದೆ ಎಂದಿದೆ.

74 ದಿನಗಳಲ್ಲಿ ಒಂದು ಮಿಲಿಯನ್ ಗ್ರಾಹಕರನ್ನು ಹೊಂದಿದ್ದ ಐ-ಫೋನ್ ಮಾರಾಟವನ್ನು ಹಿಂದಿಕ್ಕಿರುವ ಐ-ಪ್ಯಾಡ್‌ ಇದೀಗ ಈ ಮೈಲುಗಲ್ಲನ್ನು ಕೇವಲ 28 ದಿನಗಳಲ್ಲೇ ತಲುಪಿದೆ ಎಂದು ಆಪಲ್ ಸಿಇಒ ಸ್ಟೀವ್ ಜೋಬ್ಸ್ ತಿಳಿಸಿದ್ದಾರೆ. ಐಪಾಡ್ ತನ್ನ ಒಂದು ಮಿಲಿಯನ್ ಗ್ರಾಹಕರ ಸಂಖ್ಯೆಯನ್ನು ಏಪ್ರಿಲ್ 30ರಂದು ತಲುಪಿತ್ತು.

ಗ್ರಾಹಕರ ಬೇಡಿಕೆಯು ಏರುತ್ತಲೇ ಇದ್ದು, ಇದನ್ನು ಪೂರೈಸುವ ಕ್ರಮ ಮುಂದುವರಿದಿದೆ ಎಂದವರು ಹೇಳಿದರು.

ಕಂಪ್ಯೂಟರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಆಪಲ್‌ನ ಹೊಸ ಅವತಾರ ಟ್ಯಾಬ್ಲೆಟ್ ಕಂಪ್ಯೂಟರ್ 0.5 ದಪ್ಪವಿದ್ದು, 681 ಗ್ರಾಂ ತೂಕ ಹೊಂದಿದೆ. ಇದರೊಂದಿಗೆ ಬಳಕೆದಾರರಿಗೆ ಮಲ್ಟಿ ಟಚ್ ಸ್ಕ್ರೀನ್ ಮೂಲಕ ಅಂತರ್ಜಾಲ ತಾಣ ಬ್ರೌಸ್ ಮಾಡಲು, ಇ-ಮೇಲ್ ಓದಲು ಹಾಗೂ ಕಳುಹಿಸಲು, ಎಚ್‌ಡಿ ವೀಡೀಯೋ ವೀಕ್ಷಿಸಲು, ಸಂಗೀತ ಆಲಿಸಲು ಮತ್ತು ಇ-ಬುಕ್ ಓದಲು ಅನುಕೂಲವಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ