ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನ್ಯಾನೋಗೆ ಸಡ್ಡು; ಬರಲಿದೆ ಬಜಾಜ್-ನಿಸ್ಸಾನ್ ಅಗ್ಗದ ಕಾರು! (Nano | Bajaj | Nissan | Tata)
Bookmark and Share Feedback Print
 
ಅಗ್ಗದ ಕಾರು ಎಂದೇ ಜನಪ್ರಿಯಗೊಂಡಿದ್ದ ಟಾಟಾದ ನ್ಯಾನೋಗೆ ಸಡ್ಡು ನೀಡಲು ಇದೀಗ ಬಜಾಜ್-ನಿಸ್ಸಾನ್‌ನ ನೂತನ ಕಾರು ಮಾರುಕಟ್ಟೆಗೆ ಬರುತ್ತಿದೆ.

ರೆನಾಲ್ಟ್ ಮತ್ತು ನಿಸ್ಸಾನ್ ಮುಖ್ಯಸ್ಥ ಕಾರ್ಲೊಸ್ ಗೋಸ್ನ್ ಇದನ್ನು ಖಚಿತಪಡಿಸಿದ್ದು, ಬಜಾಜ್ ಜತೆ ಸೇರಿ ಈ ನೂತನ ಯೋಜನೆಗೆ ಕೈ ಹಾಕಿದ್ದಾರೆ. ಮುಂಬರುವ ದಿನಗಳಲ್ಲಿ ಅತೀ ಅಗ್ಗದ ಕಾರು ಎನಿಸಿಕೊಳ್ಳಲಿರುವ ಈ ಕಾರು 1.1 ಲಕ್ಷ ರೂಪಾಯಿಗೆ ಗ್ರಾಹಕರಿಗೆ ಒಪ್ಪಿಸುವ ಗುರಿ ಹೊಂದಿದೆ.

ಬಜಾಜ್ ಜತೆಗಿನ ಗೋಸ್ನ್ ಅವರ ಯುಎಲ್‌ಸಿ ಯೋಜನೆಗೆ ಆರಂಭದಲ್ಲಿ ಸಾಕಷ್ಟು ತೊಡಕುಂಟಾಗಿತ್ತು. ಆದರೆ ಕಳೆದ ವರ್ಷ ಮೇ ಕಾರು 2012ರ ಅವಧಿಗೆ ಮಾರುಕಟ್ಟೆಗೆ ಬರಲಿದೆ ಎಂದು ಕಂಪೆನಿಯು ತಿಳಿಸಿತ್ತು.

ಭಾರತದ ಮಾರುಕಟ್ಟೆಗೆ ಅನುಗುಣವಾಗಿ ಬಜಾಜ್ ಜತೆ ಸೇರಿ ರಿನಾಲ್ಟ್ ಮತ್ತು ನಿಸ್ಸಾನ್ ಕಡಿಮೆ ದರದ ವಾಹನವನ್ನು ಅಭಿವೃದ್ಧಿಪಡಿಸುತ್ತಿದ್ದು, 2500 ಅಮೆರಿಕನ್ ಡಾಲರ್‌ಗೆ ಗ್ರಾಹಕರಿಗೆ ಒಪ್ಪಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಗೋಸ್ನ್ ತಿಳಿಸಿದರು.

ಈ ನೂತನ ಕಾರು ಇದೇ ವರ್ಷವೇ ಮಾರುಕಟ್ಟೆಗೆ ಪ್ರವೇಶಿಸಬೇಕಾಗಿತ್ತು. ಆದರೆ ಇದೀಗ 2012ಕ್ಕೆ ಮುಂದೂಡಲ್ಪಟ್ಟಿದೆ. ಆ ಮೂಲಕ ಟಾಟಾ ನ್ಯಾನೋಗೆ ಸಡ್ಡು ನೀಡಲು ಸಜ್ಜಾಗಲಿದೆ. ಸಂದ್ಯ ಟಾಟಾ ನ್ಯಾನೋ 1.23ರಿಂದ 1.72 ಲಕ್ಷ ರೂಪಾಯಿಗಳಿಗೆ ಲಭಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಟಾಟಾ, ನ್ಯಾನೋ, ಬಜಾಜ್, ನಿಸ್ಸಾನ್