ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹುಂಡೈ ಸಾಗರೋತ್ತರ ಮಾರಾಟ ಏರಿಕೆ, ದೇಶೀಯ ಮಾರಾಟ ಕುಸಿತ (Hyundai | April car sales)
Bookmark and Share Feedback Print
 
ದಕ್ಷಿಣ ಕೊರಿಯಾದ ಪ್ರಮುಖ ಕಾರು ತಯಾರಿಕಾ ಸಂಸ್ಥೆ ಹುಂಡೈ ಮೋಟಾರ್ಸ್ ತನ್ನ ಸಾಗರೋತ್ತರ ದೇಶಗಳಲ್ಲಿ ಕಾರು ಮಾರಾಟವನ್ನು ಹೆಚ್ಚಿಸಿಕೊಂಡರೆ ದೇಶೀಯ ಮಾರಾಟದಲ್ಲಿ ಕುಸಿತ ಕಂಡಿದೆ.

ಏಪ್ರಿಲ್ ತಿಂಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಹುಂಡೈ ತನ್ನ ದೇಶೀಯ ಮಾರಾಟದಲ್ಲಿ ಇಳಿಕೆಯಾಗಿದೆ. ಹುಂಡೈ ಏಪ್ರಿಲ್ ತಿಂಗಳೊಂದರಲ್ಲಿ 310,396 ಯುನಿಟ್‌ಗಳು ಮಾರಾಟ ಕಂಡಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 243,343 ಯುನಿಟ್ ಮಾರಾಟ ಕಂಡಿದ್ದು ಈ ವರ್ಷ ಶೇ.12ರ ಉತ್ತಮ ಏರಿಕೆ ದಾಖಲಿಸಿದೆ.

ಹುಂಡೈ ಕಳೆದ ವರ್ಷ ಆರ್ಥಿಕ ಕುಸಿತದಿಂದಾಗಿ ತೀವ್ರ ಹೊಡೆತ ಅನುಭವಿಸಿತ್ತು. ಪ್ರಮುಖವಾಗಿ ಯುಎಸ್ ಮಾರುಕಟ್ಟೆಯಲ್ಲಿ ಹುಂಡೈ ಕಾರು ತಯಾರಿಕಾ ಸಂಸ್ಥೆ ಸಾಕಷ್ಟು ಪೆಟ್ಟು ತಿಂದಿತ್ತು. ಆದರೆ ಈ ವರ್ಷ ಚೇತರಿಕೆ ಕಂಡುಬರುತ್ತಿದ್ದು, ಯುಎಸ್ ಮಾರುಕಟ್ಟೆಯಲ್ಲೂ ಚೇತೋಹಾರಿ ಬೆಳವಣಿಗೆ ಕಾಣುತ್ತಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹುಂಡೈ, ಕಾರು ಮಾರಾಟ