ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿಶ್ವ ಬ್ಯಾಂಕ್ ನಿಷೇಧ; ಪಾತಾಳಕ್ಕೆ ವೀಡಿಯೋಕಾನ್ ಶೇರು (Shares | Videocon Industries | World Bank | India)
Bookmark and Share Feedback Print
 
ವಂಚನೆ ಹಾಗೂ ಭ್ರಷ್ಟಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಬ್ಯಾಂಕ್‌ನಿಂದ ಮೂರು ವರ್ಷಗಳ ನಿಷೇಧಕ್ಕೊಳಗಾಗಿರುವ 'ವೀಡಿಯೋಕಾನ್ ಇಂಡಸ್ಟ್ರೀಸ್' ತೀವ್ರ ಹಿನ್ನಡೆ ಅನುಭವಿಸಿದ್ದು, ಭಾರತೀಯ ಶೇರು ಮಾರುಕಟ್ಟೆಯಲ್ಲಿ ದೊಪ್ಪನೆ ಕುಸಿದಿದೆ.

ಮುಂಬೈ ಶೇರು ಸೂಚ್ಯಂಕದಲ್ಲಿ ವಿಶ್ವ ಬ್ಯಾಂಕ್ ನಿರ್ಧಾರದ ಪರಿಣಾಮ ವೀಡಿಯೋಕಾನ್ ಶೇರುಗಳು ಶೇಕಡಾ 12ರಷ್ಟು ಕುಸಿತ ಕಂಡಿವೆ.

ಮುಂಬೈ ಶೇರುಪೇಟೆಯಲ್ಲಿ ದುರ್ಬಲ ಆರಂಭ ಪಡೆದುಕೊಂಡ ವೀಡಿಯೋಕಾನ್ ಶೇರುಗಳು ಶೇಕಡಾ 11.69ರ ಕುಸಿತ ಕಂಡು, 200 ರೂಪಾಯಿಗಳಿಗೆ ಕುಸಿದಿದೆ.

ವಸೂಲಿ ನಿರ್ದೇಶನ ತತ್ವಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮುಂದಿನ ಮೂರು ವರ್ಷಗಳಿಗೆ ತನ್ನ ಜತೆಗಿನ ಎಲ್ಲಾ ವಹಿವಾಟುಗಳಿಗೂ ವಿಶ್ವ ಬ್ಯಾಕ್ 2010ರ ಜನವರಿ 11ರಿಂದ ಜಾರಿಗೆ ಬರುವಂತೆ ಮಂಗಳವಾರ ನಿಷೇಧ ಹೇರಿತ್ತು.

ರಾಷ್ಟ್ರೀಯ ಶೇರುಪೇಟೆ ನಿಫ್ಟಿಯಲ್ಲಿಯೂ ಶೇ.8.12ರಷ್ಟು ಕುಸಿತ ಕಂಡಿರುವ ವೀಡಿಯೋಕಾನ್ ಶೇರುಗಳು 208.15 ರೂಪಾಯಿಗಳಿಗೆ ಇಳಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ