ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2009-10ರ ಅವಧಿಯಲ್ಲಿ ರಫ್ತು ಕುಸಿತ: ಸರಕಾರ (India | exports | Cricket | Govt)
Bookmark and Share Feedback Print
 
ಕಳೆದ ವರ್ಷಕ್ಕೆ ಹೋಲಿಸಿದಾಗ ಜಾಗತಿಕ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ 2009-10ರ ರಫ್ತು ವ್ಯವಹಾರದಲ್ಲಿ ಹಿನ್ನಡೆಯುಂಟಾಗಿದ್ದರೂ, 170 ಬಿಲಿಯನ್‌ ಡಾಲರ್ ಮೈಲುಗಲ್ಲನ್ನು ದಾಟಲಿದೆ ಎಂದು ಸರಕಾರ ಮಂಗಳವಾರ ತಿಳಿಸಿದೆ. 2008-09ರ ಸಾಲಿನಲ್ಲಿ ಭಾರತವು ರಫ್ತು ಕ್ಷೇತ್ರದಿಂದ 185 ಬಿಲಿಯನ್‌ ಡಾಲರ್ ಸಂಪಾದಿಸಿತ್ತು.

ನಾವು 170 ಬಿಲಿಯನ್‌ ಡಾಲರ್‌ಗಳಷ್ಟು ರಫ್ತು ವ್ಯವಹಾರವನ್ನು ನಿರೀಕ್ಷಿಸಬಹುದಾಗಿದೆ. ಆದರೂ ಕಳೆದ ವರ್ಷಕ್ಕೆ ಹೋಲಿಸಿದಾಗ ಸಣ್ಣ ಪ್ರಮಾಣದ ಕುಸಿತವಾಗಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಚಿನ್ ಆನಂದ್ ಶರ್ಮಾ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಕಾರ್ಯಕ್ರಮದ ಸಂದರ್ಭದಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.

2009-10ರ ಅಧಿಕೃತ ವ್ಯಾಪಾರ ದಾಖಲೆಗಳು ವಾರಾಂತ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಜಾಗತಿಕ ಹಿಂಜರಿತ ಹಿನ್ನೆಲೆಯಲ್ಲಿ ದೇಶದ ರಫ್ತು ಪ್ರಮಾಣವು ಕಳೆದ 13 ತಿಂಗಳಲ್ಲಿ ಒಂದೇ ಪರಿಮಾಣದಲ್ಲಿದೆ. ದೇಶದ ರಫ್ತು 2009 ಮೇ ತಿಂಗಳಲ್ಲಿ ಶೇಕಡಾ 39ರಷ್ಟು ಕುಸಿತ ಕಂಡಿತ್ತು. ಆದರೆ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಏರಿಕೆ ಕಂಡಿತ್ತು.

ಜಾಗತಿಕ ಹಿಂಜರಿತದ ಹಿನ್ನೆಲೆಯಲ್ಲಿ ಕುಸಿತಗೊಂಡಿದ್ದ ರಫ್ತು ಪ್ರಮಾಣವನ್ನು ತಡೆ ಗಟ್ಟುವಲ್ಲಿ ಸರಕಾರವು ಉತ್ತೇಜನ ಪ್ಯಾಕೇಜ್ ಘೋಷಿಸಿತ್ತು. ಅಲ್ಲದೆ ಆರ್ಥಿಕ ಕುಸಿತವನ್ನು ತಡೆಗಟ್ಟಲು ಸರಕಾರ 2008ರಲ್ಲಿ ನೂತನ ಯೋಜನೆ ಜಾರಿಗೊಳಿಸಿತ್ತು. ಅದರಂತೆ ರಫ್ತುಗಳಿಗೆ ಬಡ್ಡಿ ಸಬ್ಸಿಡಿಗಳನ್ನು ಪ್ರಕಟಿಸಿತ್ತು. ನಂತರ ಆಗಸ್ಟ್‌ನಲ್ಲಿ ವಿದೇಶಿ ವ್ಯಾಪಾರ ನೀತಿಗೆ ಇನ್ನೂ ಹೆಚ್ಚಿನ ಉತ್ತೇಜನವನ್ನು ನೀಡಿತ್ತು.

ನಿರಂತರ ನಾಲ್ಕು ತಿಂಗಳಲ್ಲಿ ಏರಿಕೆಗೊಂಡಿರುವ ರಫ್ತು ಪ್ರಮಾಣವು ಫೆಬ್ರವರಿ ತಿಂಗಳಲ್ಲಿ ಶೇಕಡಾ 34.8ರಷ್ಟು ಏರಿಕೆ ಕಾಣುವ ಮೂಲಕ 16.1 ಬಿಲಿಯನ್‌ಗೆ ತಲುಪಿತ್ತು. ಇದು ಕಳೆದ ವರ್ಷ 11.9 ಬಿಲಿಯನ್‌ಗಳಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸರಕಾರ, ರಫ್ತು, ಕ್ರಿಕೆಟ್, ಭಾರತ