ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪಾನ್-ಇಂಡಿಯಾ 3ಜಿ ಹರಾಜು 10,749 ಕೋಟಿಗೆ (3G spectrum | India | Mumbai | Delhi)
Bookmark and Share Feedback Print
 
3ಜಿ ತರಂಗಾಂತರಗಳ ಹರಾಜಿನ 21ನೇ ದಿನ ಪಾನ್-ಇಂಡಿಯಾ ವಲಯದ ಬಿಡ್ 10,749 ಕೋಟಿ ರೂಪಾಯಿಗಳಿಗೆ ತಲುಪಿದ್ದು, ಸರಕಾರಕ್ಕೆ 43,372 ಕೋಟಿ ರೂಪಾಯಿ ಆದಾಯ ತರುವುದನ್ನು ಖಚಿತಪಡಿಸಿದೆ.

ಅದೇ ವೇಳೆ ಹರಾಜು ಪ್ರಕ್ರಿಯೆ ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯಲಿದ್ದು, ಬಿಡ್ ದರದಲ್ಲಿ ಮತ್ತಷ್ಟು ಹೆಚ್ಚಳದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ದೂರಸಂಪರ್ಕ ಇಲಾಖೆ (ಡಾಟ್) ಮೂಲಗಳು ತಿಳಿಸಿವೆ.

3ಜಿ ಸ್ಪೆಕ್ಟ್ರಂ ತರಂಗಾಂತರಗಳ ಹರಾಜು ಬಗೆ ಇದ್ದ ಹಿಂದಿನ ಎಲ್ಲಾ ಲೆಕ್ಕಾಚಾರವನ್ನು ಮೀರಿ ನಿಂತಿದ್ದು, ದೇಶದ ಮುಂಚೂಣಿಯಲ್ಲಿರುವ ಮೊಬೈಲ್ ಸೇವಾ ಸಂಸ್ಥೆಗಳಾದ ಭಾರ್ತಿ ಏರ್‌ಟೆಲ್, ವೋಡಾಫೋನ್ ಎಸ್ಸಾರ್, ಐಡಿಯಾ, ಆರ್ ಕಾಮ್ ಮತ್ತು ಟಾಟಾ ಕಂಪೆನಿಗಳು ಭಾರೀ ಬಿಡ್ಡಿಂಗ್ ಮಾಡಿವೆ.

320 ಕೋಟಿ ರೂಪಾಯಿಗಳ ಕನಿಷ್ಠ ಮೊತ್ತವನ್ನು ನಿಗದಿಪಡಿಸಲಾಗಿದ್ದ ಮುಂಬೈ ಮತ್ತು ದೆಹಲಿ ವಲಯಗಳು ಹರಾಜಿನಲ್ಲಿ ಪರಿಣಾಮಕಾರಿಯಾಗಿ ಮುಂದುವರಿದಿದ್ದು, ತಲಾ 1,700 ಕೋಟಿ ರೂಪಾಯಿಗಳನ್ನೂ ಮೀರಿ ನಿಂತಿವೆ. ಮುಂಬೈ ಮತ್ತು ದೆಹಲಿ ಎರಡೂ ವಲಯಗಳಲ್ಲಿ ತಲಾ ಮೂರು ಸ್ಥಾನಗಳನ್ನು ಹರಾಜಿಗೆ ತೆರೆಯಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತ್ರಿಜಿ, ಹರಾಜು, ಮುಂಬೈ, ದೆಹಲಿ