ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜಾಗತಿಕ ಆರ್ಥಿಕ ಬಿಕ್ಕಟ್ಟು: ರಫ್ತು ಪ್ರಮಾಣದಲ್ಲಿ ಕುಸಿತ (Business | Ficci | Export | Global Economic Meltdown)
Bookmark and Share Feedback Print
 
ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮದಿಂದಾಗಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ 2009-10ನೇ ಸಾಲಿನ ರಫ್ತು ಪ್ರಮಾಣ ಕುಸಿತವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತೀಯ ವಾಣಿಜ್ಯೋದ್ಯಮಿಗಳ ಮಹಾಸಂಘಗಳ ಒಕ್ಕೂಟ ಫಿಕ್ಕಿ ಏರ್ಪಡಿಸಿದ್ದ ಸಮಾರಂಭದ್ಲಲಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ್ ಶರ್ಮಾ, 2008-09ರ ಸಾಲಿನಲ್ಲಿ ದೇಶದ ರಫ್ತು ಪ್ರಮಾಣ 185 ಶತಕೋಟಿ ಡಾಲರ್‌ಗಳಷ್ಟಿತ್ತು. ಆದರೆ ಈ ಬಾರಿ 2009-10ನೇ ಸಾಲಿನಲ್ಲಿ ಇದು 170 ಶತಕೋಟಿ ಡಾಲರ್‌ಗಳಿಗೆ ಇಳಿಕೆಯಾಗಿದೆ. ಆದರೆ ಸರ್ಕಾರದ ತೆರಿಗೆ ರಿಯಾಯಿತಿ ಕ್ರಮಗಳು ಹಾಗೂ ವಾಣಿಜ್ಯ ಸಚಿವಾಲಯದ ಹಸ್ತಕ್ಷೇಪ ಮತ್ತಿತರ ಕಾರಣಕ್ಕೆ ರಫ್ತುದಾರರು ಬೇಡಿಕೆ ಕುಸಿತವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಯಿತು ಎಂದು ತಿಳಿಸಿದರು.

ಜಾಗತಿಕ ಆರ್ಥಿಕ ಕುಸಿತದ ಫಲವಾಗಿ ದೇಶದ ರಫ್ತು ಪ್ರಮಾಣ 2008ರ ಅಕ್ಟೋಬರ್ ತಿಂಗಳಿಂದಲೇ ಸತತ 13 ತಿಂಗಳುಗಳ ಕಾಲ ಕುಸಿಯುತ್ತಲೇ ಸಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ