ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜುಲೈನಿಂದ ಯುಲಿಪ್ ಯೋಜನೆಗೆ ಐಆರ್‌ಡಿಎ ಹೊಸ ನಿಯಮ (IRDA, Business, Insurence Policy)
Bookmark and Share Feedback Print
 
ಜೀವವಿಮೆ ಪಾಲಿಸಿಗಳ ಕೆಲ ಮೊತ್ತವನ್ನು ಷೇರು ಮಾರುಕಟ್ಟೆ ವಹಿವಾಟಿನಲ್ಲಿ ತೊಡಗಿಸುವ ಯೂಲಿಪ್ ಯೋಜನೆಗಳು ಪಾಲಿಸಿದಾರರಿಗೆ ಜೀವರಕ್ಷಕ ಕೊಡುಗೆ ನೀಡಬೇಕೆಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಹೊಸ ಆದೇಶ ಹೊರಡಿಸಿದೆ.

ಯಾವುದೇ ಮೂಲಗಳಿಂದ ಸಾಲ ಪಡೆಯಲು ಯೂಲಿಪ್‌ಗಳನ್ನು ಬಳಸಬಾರದು ಎಂದಿರುವ ಐಆರ್‌ಡಿಎ, ಯೂಲಿಪ್‌ಗಳು ಆರೋಗ್ಯ ವಿಮೆ ಸೌಲಭ್ಯ ಒದಗಿಸುತ್ತಿದ್ದರೆ, ಪಾಲಿಸಿದಾರನ ಆಕಸ್ಮಿಕ ಸಾವಿಗೆ ಪರಿಹಾರ ನೀಡುವುದು ಕಡ್ಡಾಯವಲ್ಲ ಎಂದೂ ಹೇಳಿದೆ.

ಈ ಹೊಸ ಆದೇಶ ಜುಲೈ ತಿಂಗಳಿಂದ ಜಾರಿಗೆ ಬರಲಿದ್ದು, ವ್ಯಕ್ತಿಗತ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಕನಿಷ್ಟ ಪಾಲಿಸಿ ಅವಧಿ 5 ವರ್ಷಗಳ ಅವಧಿ ಹೊಂದಿರಬೇಕು. ಗುಂಪು ಉತ್ಪನ್ನಗಳನ್ನು ಪ್ರತಿ ವರ್ಷ ನವೀಕರಿಸಬಹುದು ಎಂದಿದೆ.
ಸಂಬಂಧಿತ ಮಾಹಿತಿ ಹುಡುಕಿ