ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ತೆಲ ಕಂಪನಿಗಳಿಗೆ ಸರ್ಕಾರದಿಂದ 14 ಸಾವಿರ ಕೋಟಿ ರೂ ನೆರವು (Indian oil | Oil PSUs | Bharat Petroleum | HPCL)
Bookmark and Share Feedback Print
 
ತೈಲ ವ್ಯಾಪಾರಿ ಸಂಸ್ಥೆಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಎಚ್‌ಪಿಸಿಎಲ್‌ಗಳಿಗೆ 14,000 ಕೋಟಿ ರೂಪಾಯಿಗಳ ಹಣಕಾಸು ನೆರವನ್ನು ನೀಡಲು ಕೊನೆಗೂ ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಮೂರು ಸಂಸ್ಥೆಗಳು 2009-10ರ ಸಾಲಿನಲ್ಲಿ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಎಲ್‌ಪಿಜಿ ಹಾಗೂ ಕೆರೋಸಿನ್‌ಗಳ ಸ್ಥಳೀಯ ಮಾರಾಟದಿಂದಾಗಿ 31,621 ಕೋಟಿ ರೂಪಾಯಿಗಳ ನಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ 12,000 ಕೋಟಿ ರೂಪಾಯಿಗಳ ಧನ ಸಹಾಯ ನೀಡಿತ್ತು. ಇದೀಗ 14,000 ಕೋಟಿ ರೂಪಾಯಿಗಳನ್ನು ನೀಡಲು ನಿರ್ಧರಿಸಿದೆ.

ತೈಲ ಇಲಾಖೆಯ ಕಾರ್ಯದರ್ಶಿ ಎಸ್.ಸುಂದರನ್ ವೆಚ್ಚ ಇಲಾಖೆಯ ಸುಷ್ಮಾ ನಾಥ್ ಅವರನ್ನು ಭೇಟಿಯಾಗಿ 19,620.9 ಕೋಟಿ ರೂಪಾಯಿಗಳ ನೆರವು ತೈಲ ಕಂಪನಿಗಳಿಗೆ ಅಗತ್ಯವಿದೆ ಎಂಬ ಬಗ್ಗೆ ಮಾತುಕತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅಂತಿಮವಾಗಿ 14,000 ಕೋಟಿ ರೂಪಾಯಿಗಳ ನೆರವು ನೀಡಲು ತೀರ್ಮಾನಿಸಲಾಗಿದೆ. ಆದರೆ ಉಳಿದ 5,621 ಕೋಟಿ ರೂಪಾಯಿ ಕೋಟಿ ರೂಪಾಯಿಗಳ ಉಳಿದ ನಷ್ಟವನ್ನು ತುಂಬುವ ಬಗ್ಗೆ ಸರ್ಕಾರ ಯಾವುದೇ ವಿವರ ಪ್ರಕಟಿಸಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ