ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆಹಾರ ಹಣದುಬ್ಬರ ಶೇ.16.04ಕ್ಕೆ ಇಳಿಕೆ (Price rise | Food inflation)
Bookmark and Share Feedback Print
 
ಆಹಾರ ಹಣದುಬ್ಬರ ಇದೇ ಏ.24ಕ್ಕೆ ಅಂತ್ಯವಾಗುವ ವಾರದಲ್ಲಿ ಇದೀಗ ಶೇ.16.04ಕ್ಕೆ ಇಳಿದಿದೆ.

ಹಣದುಬ್ಬರ ಇದಕ್ಕೂ ಮೊದಲಿನ ವಾರದಲ್ಲಿ ಶೇ.16.61ರಷ್ಟಿದ್ದು, ಈ ವಾರ ಶೇ.0.57ರಷ್ಟು ಕುಸಿತ ಕಂಡಿದೆ. ಈ ವಾರದಲ್ಲಿ ಮೀನು, ಹಣ್ಣುಹಂಪಲು, ಗೋಧಿ, ತರಕಾರಿ ಬೆಲೆಗಳು ಕೊಂಚ ಇಳಿಮುಖವಾಗಿವೆ.

ಆಹಾರ ಧಾನ್ಯಗಳ ಬೆಲೆ ಶೇ.0.19ರಷ್ಟು ಇಳಿಕೆ ಕಂಡರೆ, ಅಕ್ಕಿ ಬೆಲೆ ಶೇ.0.12ರಷ್ಟು ಇಳಿದಿವೆ. ಆದರೆ ಕೆಲವು ಬೇಳೆಕಾಳುಗಳ ದರ ಶೇ.0.60ಯಷ್ಟು ಏರಿಕೆಯನ್ನೂ ಕಂಡಿವೆ.

ಆದರೂ, ಚಹಾ ಬೆಲೆ ಶೇ.0.13ರಷ್ಟು ಏರಿದರೆ, ಮೊಟ್ಟೆ ಬೆಲೆ ಶೇ.1ರಷ್ಟು ಏರಿದೆ. ಈ ಬಾರಿ ಆಲೂಗಡ್ಡೆ, ಈರುಳ್ಳಿ ಸೇರಿದಂತೆ ತರಕಾರಿ ಬೆಲೆ ಇಳಿಮುಖವಾದರೆ, ಕೆಲವು ಹಣ್ಣುಗಳು, ದ್ವಿದಳ ಧಾನ್ಯಗಳು, ಹಾಲಿನ ಬೆಲೆ ಏರಿದೆ.

ಆಹಾರ ಹಣದುಬ್ಬರ ಕಳೆದ ಡಿಸೆಂಬರ್ ತಿಂಗಳಲ್ಲಿ ಶೇ.20ರಷ್ಟಕ್ಕೆ ತಲುಪಿದ್ದು, ಈ ವರ್ಷ ಕೊಂಚ ಸುಧಾರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಹಾರ ಹಣದುಬ್ಬರ, ಬೆಲೆ ಏರಿಕೆ