ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೈನಿಕ ಜಾಗರಣ್-ಮಿಡ್ ಡೇ ವಿನಿಮಯ ಒಪ್ಪಂದ (Dainik Jagran | Mid-Day | swap deal | India)
Bookmark and Share Feedback Print
 
'ಮಿಡ್-ಡೇ' ಪತ್ರಿಕಾ ಸಮೂಹವನ್ನು ಹಿಂದಿ ದೈನಿಕ 'ದೈನಿಕ್ ಜಾಗರಣ್' ಪ್ರಕಾಶಕರಾದ 'ಜಾಗರಣ್ ಪ್ರಕಾಶನ' ಪಡೆದುಕೊಂಡಿದ್ದು, ಎರಡು ಸಂಸ್ಥೆಗಳ ನಡುವೆ ಶೇರು ವಿನಿಮಯ ಒಪ್ಪಂದದ ನಡೆದಿದೆ.

ಮಿಡ್-ಡೇ ಮಲ್ಟಿಮೀಡಿಯಾ ಪ್ರಕಾಶನ ಸಂಸ್ಥೆಯು ಮುಂಬೈ, ಪುಣೆ, ಬೆಂಗಳೂರು ಮತ್ತು ದೆಹಲಿಯಲ್ಲಿನ ಸಂಜೆ ಪತ್ರಿಕೆಗಳು, ಸಂಡೆ ಮಿಡ್-ಡೇ, ಗುಜರಾತಿ ಮಿಡ್-ಡೇ ಮತ್ತು ಉರ್ದು ಪತ್ರಿಕೆ 'ಇಕಿಂಲಾಬ್' ಪತ್ರಿಕೆಗಳು ಮತ್ತು ಮಿಡ್-ಡೇ ವೆಬ್‌ಸೈಟ್‌ಗಳನ್ನು ಒಳಗೊಂಡಿದೆ.

ಎಮ್‌ಎಮ್‌ಎಲ್‌ನ ಅಂಗ ಸಂಸ್ಥೆ ಮಿಡ್-ಡೇ ಇನ್ಪೋಮಿಡೀಯಾ ಲಿಮಿಟೆಡ್‌ನ ಅಡಿಯಲ್ಲಿ ಈ ಎಲ್ಲಾ ಪ್ರಕಾಶನ ವ್ಯವಹಾರಗಳು ನಡೆಯುತ್ತಿದ್ದು, ಒಪ್ಪಂದದಂತೆ ಎಂಎಂಎಲ್ ಕಂಪನಿಯಿಂದ ಮಿಡ್-ಡೇಯನ್ನು ಬೇರ್ಪಡಿಸಿ ಜಿಪಿಎಲ್‌ಗೆ ಸೇರಿಸಲಾಗುತ್ತದೆ. ಇದರಂತೆ ಎಂಎಂಎಲ್ ಶೇರುದಾರರು ತಾವು ಹೊಂದಿರುವ 10 ರೂಪಾಯಿ ಮೌಲ್ಯದ ಪ್ರತಿ ಏಳು ಶೇರುಗಳಿಗೆ ಜೆಪಿಎಲ್‌ನ ಎರಡು ರೂಪಾಯಿ ಮೌಲ್ಯದ ಶೇರುಗಳನ್ನು ಪಡೆಯಲಿದ್ದಾರೆ.

ಅದೇ ವೇಳೆ ಒಪ್ಪಂದವು ಎಂಎಂಎಲ್‌ನ ಪಶ್ಚಿಮ ಭಾರತದಲ್ಲಿನ ಅಂಗ ಸಂಸ್ಥೆ ರೇಡಿಯೋ ಮಿಡ್‌-ಡೇಯನ್ನು ಹೊಂದಿಲ್ಲ. ಅದು ಎಂಎಂಎಲ್‌ನ ಅಂಗಸಂಸ್ಥೆಯಾಗಿಯೇ ಮುಂದುವರಿಯಲಿದ್ದು, ಶೇರುದಾರರು ಯಾವುದೇ ಬದಲಾವಣೆಗೊಳಗಾಗುವುದಿಲ್ಲ ಎಂದು ಮುಂಬೈ ಶೇರು ಮಾರುಕಟ್ಟೆಗೆ ಎರಡೂ ಪಕ್ಷಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ