ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಂಜಿನಿಯರ್ ಮನೆಗೆ ದಾಳಿ; 1.68 ಕೋಟಿ ವಶ (Anti-Corruption Bureau | Public Works Department | engineer | Pune)
Bookmark and Share Feedback Print
 
ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಕಾರ್ಯನಿರ್ವಾಹಕ ಎಂಜಿನಿಯರ್ ಮನೆಗೆ ನಡೆಸಿದ ದಾಳಿಯಲ್ಲಿ 1.68 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳುವ ಮೂಲಕ ಭ್ರಷ್ಟಾಚಾರ ತಡೆ ದಳ (ಎಸಿಬಿ) ನೂತನ ದಾಖಲೆ ಮಾಡಿದೆ.

ಲಂಚ ಪ್ರಕರಣದ ಎಂಜಿಯನರ್ ವಿಕ್ರಮ್ ಪಶುರಾಮ್ ಜಾಧವ್‌ರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇದೇ ಪ್ರಕರಣದಲ್ಲಿ ಹಿರಿಯ ಗುಮಾಸ್ತ ಯೋಗೀಶ್ ತಾರ್ತೆರನ್ನು ಕೂಡಾ ಸೆರೆ ಹಿಡಿಯಲಾಗಿದೆ.

ಕಚೇರಿಗೆ ನಾವು ದಾಳಿ ನಡೆಸಿದೆವು. ಪೊಲೀಸ್ ಇನ್ಸೆಪೆಕ್ಟರ್ ರಾಧಿಕಾ ಪಾಡಕೆ ನೇತೃತ್ವದ ಮತ್ತೊಂದು ತಂಡವು ಜಾಧವ್ ನಿವಾಸಕ್ಕೆ ದಾಳಿಯಿಂದ 1.68 ಕೋಟಿ ಪತ್ತೆ ಹಚ್ಚಿದೆ. ಅಲ್ಲದೆ ಚಿನ್ನ ಸಹಿತ ಬೆಳ್ಳಿಯನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿಯ ಪೊಲೀಸ್ ಸಹಾಯಕ ಆಯುಕ್ತ ಅಜಯ್ ಕದಂ ತಿಳಿಸಿದ್ದಾರೆ.

ಭ್ರಷ್ಟಾಚಾರ ತಡೆ ಘಟಕವು ಕಾರ್ಯಾಚರಣೆಯಲ್ಲಿ ಇಷ್ಟು ದೊಡ್ಡ ಮೊತ್ತವನ್ನು ವಶಪಡಿಸಿಕೊಳ್ಳುತ್ತಿರುವುದು ಇದೇ ಮೊದಲು ಎಂದವರು ಹೇಳಿದರು.

ಎಸಿಬಿಯಿಂದ ನಡೆಸಿಲಾಗಿದ್ದ ಈ ಹಿಂದಿನ ದಾಳಿಯಲ್ಲಿ ಗರಿಷ್ಠ 57.97 ಲಕ್ಷ ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೆ 11.11 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನ, ಬೆಳ್ಳಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ