ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ (Rupee|dollar)
Bookmark and Share Feedback Print
 
ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 32 ಪೈಸೆಗಳಷ್ಟು ಕುಸಿದಿದ್ದು, ಪ್ರತಿ ಡಾಲರ್ ಎದುರು 45.62 ರೂಪಾಯಿ ದಾಖಲಾಗಿದೆ.

ಈ ಮೊದಲ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 37 ಪೈಸೆಯಷ್ಟು ಕುಸಿದಿತ್ತು. ಕಳೆದ ಆರು ವಾರಗಳಿಗೆ ಹೋಲಿಸಿದರೆ ಅತೀ ಹೆಚ್ಚು ರೂಪಾಯಿ ಮೌಲ್ಯ ಈ ಬಾರಿ ಕುಸಿದಿದೆ.

ಫಾರೆಕ್ಸ್ ಮೂಲಗಳ ಪ್ರಕಾರ, ಏಷ್ಯನ್ ಕರೆನ್ಸಿಗಳ ಎದುರು ಡಾಲರ್ ಉತ್ತಮ ಮೌಲ್ಯ ವರ್ಧಿಸಿಕೊಂಡಿದ್ದು, ಇದು ಭಾರತೀಯ ರೂಪಾಯಿ ಮೇಲೂ ಪರಿಣಾಮ ಬೀರಿದೆ.

ಇದೇ ಸಂದರ್ಭ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ 267.61 ಪಾಯಿಂಟ್ ಕುಸಿದು 16,719.92ಕ್ಕೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡಾಲರ್, ರೂಪಾಯಿ