ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟಾಟಾ ಟಿ ಇನ್ನು ಮುಂದೆ ಟಾಟಾ ಗ್ಲೋಬಲ್ ಬಿವೆರೆಜಸ್ (Tata Tea | Tata Global Beverages | Tata group | India)
Bookmark and Share Feedback Print
 
ಟಾಟಾ ಗ್ರೂಪ್‌ನ ಟಾಟಾ ಟೀ ಇನ್ನು ಮುಂದೆ ಟಾಟಾ ಗ್ಲೋಬಲ್ ಬಿವರೆಜಸ್ ಎಂದು ಕರೆಸಲ್ಪಡಲಿದೆ. ಕಂಪೆನಿಯ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ರೀತಿಯಲ್ಲಿ ಪ್ರಚಾರಕ್ಕೆ ಬರಬೇಕಾದ ನಿಟ್ಟಿನಲ್ಲಿ ಹೆಸರು ಬದಲಾಯಿಸಿಕೊಳ್ಳಲಾಗಿದೆ. ಆ ಮೂಲಕ ಟಾಟಾದ ವಿಭಿನ್ನ ಉತ್ಪನ್ನಗಳನ್ನು ಒಂದೇ ವ್ಯೂಹದ ಅಡಿಯಲ್ಲಿ ಬರಲಿದೆ.

ತನ್ನ ಆದಾಯದ ಶೇಕಡಾ 70ರಷ್ಟು ಟಾಟಾ ಗ್ರೂಪ್ ವಿದೇಶದಿಂದ ಗಳಿಸುತ್ತಿದೆ. ಈ ನೂತನ ನಾಮಕರಣಕ್ಕೆ ಟಾಟಾ ಟಿ ಬೋರ್ಡ್ ಒಪ್ಪಿಗೆ ಸೂಚಿಸಿದೆ. ಆ ಮೂಲಕ ಟೆಟ್ಲಿ, ಎಯಿಟ್ ಒ ಕ್ಲಾಕ್‌ಗಳಂತಹ ಜನಪ್ರಿಯ ಉತ್ಪನ್ನಗಳು ಇನ್ನು ಮುಂದೆ ಟಾಟಾ ಗ್ಲೋಬಲ್ ಬಿವರೇಜಸ್ ಅಡಿಯಲ್ಲಿ ಬರಲಿದೆ.

ಇದರ ಮೂಲಕ ಜಾಗತಿಕವಾಗಿ ಟಾಟಾ ಬ್ರಾಂಡ್‌ನ ಹೊಸತಾದ ಪ್ರಬಲ ಉತ್ಪನ್ನ ನಿರ್ಮಾಣವಾಗಲಿದೆ ಎಂದು ಉಪಾಧ್ಯಕ್ಷ ಆರ್.ಕೆ. ಕೃಷ್ಣ ಕುಮಾರ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ