ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಿಲಯೆನ್ಸ್‌‌ ಸಿಡಿಎಂಎ ಗ್ರಾಹಕರಿಗೆ ಅನಿಯಮಿತ ಕರೆ ಆಫರ್ (Reliance | India | CDMA | GSM)
Bookmark and Share Feedback Print
 
ಪ್ರಸಕ್ತ ಹಾಗೂ ನೂತನ ಸಿಡಿಎಂಎ ಗ್ರಾಹಕರಿಗಾಗಿ ದೇಶದ ಪ್ರಮುಖ ಖಾಸಗಿ ದೂರವಾಣಿ ಸೇವಾ ಸಂಸ್ಥೆ ರಿಲಯನ್ಸ್ ಕಮ್ಯೂನಿಕೇಷನ್ಸ್ ಹೊಸ ಕರೆ ಯೋಜನೆಗಳನ್ನು ಪ್ರಕಟಿಸಿದೆ.

'ಸಿಂಪ್ಲಿ ಅನ್‌ಲಿಮಿಟೆಡ್ ಸಿಡಿಎಂಎ ಸ್ಥಳೀಯ ಪ್ಯಾಕ್' ಯೋಜನೆಯ ಮೂಲಕ ಗ್ರಾಹಕರು ತಿಂಗಳಿಗೆ 299 ರೂಪಾಯಿ ಶುಲ್ಕ ಪಾವತಿಸುವ ಮೂಲಕ ಅನಿಯಮಿತ ಸ್ಥಳೀಯ ಕರೆ ಮಾಡಬಹುದಾಗಿದೆ. ಅಲ್ಲದೆ ರಿಲಯನ್ಸ್ ಸೇರಿದಂತೆ ಇತರ ಯಾವುದೇ ಸ್ಥಳೀಯ ನೆಟ್‌ವರ್ಕ್ ಕರೆಗಳನ್ನು ಕೂಡಾ ಅನಿಯಮಿತವಾಗಿ ಮಾಡಬಹುದಾಗಿದೆ.

ಮತ್ತೊಂದು ‘ಸಿಂಪ್ಲಿ ಅನ್‌ಲಿಮಿಟೆಡ್ ಸಿಡಿಎಂಎ ನ್ಯಾಷನಲ್ ಪ್ಯಾಕ್’ ಮೂಲಕ ಪ್ರತಿ ತಿಂಗಳು 599 ರೂಪಾಯಿ ಶುಲ್ಕ ಪಾವತಿಸಿದರೆ ದೇಶದಾದ್ಯಂತ ರಿಲಯೆನ್ಸ್ ಸಂಸ್ಥೆಯ ಯಾವುದೇ ಮೊಬೈಲ್‌ಗೂ (ರಿಲಯೆನ್ಸ್ ಜಿಎಸ್ಎಂ, ಸಿಡಿಎಂಎ ಅಥವಾ ಸ್ಥಿರ ದೂರವಾಣಿ) ಅನಿಯಮಿತವಾಗಿ ಕರೆ ಮಾಡಬಹುದಾಗಿದೆ. ಅಲ್ಲದೆ ದೇಶದಾದ್ಯಂತ ಇತರ ಯಾವುದೇ ನೆಟ್‌ವರ್ಕ್‌ನ ಕರೆಗಳನ್ನೂ (ಸೀಮಿತ) ಮಾಡಬಹುದು ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ