ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 45 ಸಾವಿರ ಕೋಟಿ ದಾಟಿದ 3ಜಿ ಹರಾಜು (bid | 3G spectrum | India | Mumbai)
Bookmark and Share Feedback Print
 
ಪಾನ್-ಇಂಡಿಯಾ ವಲಯದ ಬಿಡ್ 23ನೇ ದಿನದಂತ್ಯಕ್ಕೆ 11,327 ಕೋಟಿ ರೂಪಾಯಿಗಳಿಗೆ ತಲುಪಿದ್ದು, 3ಜಿ ತರಂಗಾಂತರಗಳ ಹರಾಜಿನಿಂದ ಸರಕಾರಕ್ಕೆ ಬರಲಿರುವ ಒಟ್ಟು ಆದಾಯವು 45,000 ಕೋಟಿ ರೂಪಾಯಿಗಳನ್ನು ದಾಟಿದೆ.

3ಜಿ ಹಾಗೂ ಬ್ರಾಂಡ್‌ಬಾಂಡ್ ವೈರ್‌ಲೆಸ್ ಸಂಪರ್ಕ (ಬಿಡಬ್ಲ್ಯೂಎ)ದಿಂದ 35,000 ಕೋಟಿ ರೂಪಾಯಿಗಳ ಆದಾಯ ನಿರೀಕ್ಷಿಸಿದ್ದ ಸರಕಾರವು ಇದೀಗ 45,692 ಕೋಟಿ ರೂಪಾಯಿಗಳನ್ನು ತನ್ನ ಬೊಕ್ಕಸಕ್ಕೆ ಹಾಕಿಕೊಳ್ಳುವುದನ್ನು ಖಚಿತಪಡಿಸಿದೆ. 3ಜಿ ಹರಾಜು ಅಂತ್ಯಗೊಂಡ ಎರಡು ದಿನಗಳ ನಂತರವಷ್ಟೇ ಬಿಡಬ್ಲ್ಯೂಎ ತರಂಗಾಂತರ ಹರಾಜು ಆರಂಭವಾಗಲಿದೆ.

ಅದೇ ವೇಳೆ ಪ್ರತ್ಯೇಕ ವಲಯದ ಹರಾಜಿನಲ್ಲಿ ಮುಂಬೈ 1,986 ಹಾಗೂ ದೆಹಲಿಯ ಬಿಡ್ 1,920 ಕೋಟಿ ರೂಪಾಯಿಗಳಿಗೆ ತಲುಪಿದೆ.

23 ದಿನಗಳಲ್ಲಿ 132ರ ಸುತ್ತಿನ ಹರಾಜು ಅಂತ್ಯಗೊಂಡಾಗ ದೆಹಲಿ ಹಾಗೂ ಮುಂಬೈ ವಲಯಗಳ ಬೇಡಿಕೆಯಲ್ಲಿ ಭಾರೀ ಏರಿಯುಂಟಾಗಿದ್ದು, ಬಿಡ್ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.
ಸಂಬಂಧಿತ ಮಾಹಿತಿ ಹುಡುಕಿ