ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತ 2010ರಲ್ಲಿ ಶೇ.8.3ರ ಪ್ರಗತಿ ಕಾಣಲಿದೆ: ವಿಶ್ವಸಂಸ್ಥೆ (Economic growth | United Nations | Economic and Social Survey of Asia and the Pacific 2010)
Bookmark and Share Feedback Print
 
ಜಾಗತಿಕ ಆರ್ಥಿಕ ಕುಸಿತದಿಂದ ಚೇತರಿಸಿಕೊಳ್ಳುತ್ತಿರುವ ಭಾರತ 2010ರಲ್ಲಿ ಶೇ.8.3ರ ಆರ್ಥಿಕ ಪ್ರಗತಿ ಕಾಣುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.

ಇಕಾನಾಮಿಕ್ ಅಂಡ್ ಸೋಶಿಯಲ್ ಸರ್ವೆ ಆಫ್ ಏಷ್ಯಾ ಅಂಡ್ ದಿ ಪೆಸಿಫಿಕ್ 2010 ಎಂಬ ತನ್ನ ವಾರ್ಷಿಕ ವರದಿಯಲ್ಲಿ ವಿಶ್ವಸಂಸ್ಥೆ ಏಷ್ಯಾ ಪೆಸಿಫಿಕ್ ವಲಯದ ಒಟ್ಟು ಆರ್ಥಿಕ ಪ್ರಗತಿ ಶೇ.7ರಷ್ಟು ತಲುಪಲಿದ್ದು, ಇದರಲ್ಲಿ ಚೀನಾ ಮುಂದೆ ನಿಲ್ಲುತ್ತದೆ. ಚೀನಾ ಶೇ.9.5ರ ಪ್ರಗತಿ ಹಾಗೂ ಭಾರತ ಶೇ.8.3ರ ಪ್ರಗತಿ ಕಾಣಬಹುದು ಎಂದು ಹೇಳಿದೆ.

ಆರ್ಥಿಕ ಪ್ರಗತಿ ಹೊಂದುತ್ತಿರುವ ಸಂದರ್ಭ ಆಯಾ ದೇಶದ ಸರ್ಕಾರಗಳು ಆ ಸಂದರ್ಭವನ್ನು ಸದುಪಯೋಗಪಡಿಸಿಕೊಂಡು ಮುಂದಿನ ದಿನಗಳನ್ನು ಉತ್ತಮ ಪಡಿಸಿಕೊಳ್ಳಬೇಕು. ಅಲ್ಲದೆ ಸಾರ್ವಜನಿಕವಾಗಿ ಉಪಯೋಗವಾಗುವಂಥ ಯೋಜನೆಗಳನ್ನು ಜಾರಿಗೆ ತಂದು ಪ್ರಗತಿಯತ್ತ ದೇಶವನ್ನು ಕೊಂಡೊಯ್ದು ಸದೃಢವಾಗಿಸಿಕೊಳ್ಳಬೇಕು ಎಂದೂ ಇದೇ ವರದಿಯಲ್ಲಿ ವಿಶ್ವಸಂಸ್ಥೆ ಸಲಹೆಯನ್ನೂ ನೀಡಿದೆ.

ಅಲ್ಲದೆ, ವರದಿಯಲ್ಲಿ ಜಾಗತಿಕ ಆರ್ಥಿಕ ಕುಸಿತದ ಭಾರೀ ದುರಂತವನ್ನೇ ವಿಶ್ವ ಕಂಡರೂ, ಏಷ್ಯಾ ಹಾಗೂ ಪೆಸಿಫಿಕ್ ವಲಯದಲ್ಲಿ ಈ ಕುಸಿತ ಅಂಥ ಕೆಟ್ಟ ಪರಿಣಾಮವನ್ನೇನೂ ಬೀರಿಲ್ಲ. ಬೀರಿದ್ದರೂ, ಆಯಾ ದೇಶಗಳು ಹಲವು ಉತ್ತೇಜಕ ಪ್ಯಾಕೇಜುಗಳೊಂದಿಗೆ ಇದರಿಂದ ಹೊರಬರಲು ಪ್ರಯತ್ನಿಸಿದ್ದಾರೆ ಎಂದು ವರದಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ