ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 18 ಸಾವಿರ ರೂ ದಾಟಿದ ಚಿನ್ನದ ಬೆಲೆ ಗಗನಕ್ಕೆ (Gold|bullion|silver)
Bookmark and Share Feedback Print
 
ಚಿನ್ನದ ಬೆಲೆ ಇಂದಿನ ವಹಿವಾಟಿನಲ್ಲಿ ಭಾರೀ ಏರಿಕೆ ಕಂಡಿದೆ. ಪ್ರತಿ 10 ಗ್ರಾಂಗೆ 495 ರೂಪಾಯಿಗಳು ಏರುವ ಮೂಲಕ 18,110 ರೂಪಾಯಿ ದಾಖಲಾಗುವ ಮೂಲಕ 18 ಸಾವಿರದ ಗಡಿ ದಾಟಿದೆ.

2009ರ ನವೆಂಬರ್ 26ರಲ್ಲಿ 18 ಸಾವಿರ ರೂಪಾಯಿಗಳ ಗಡಿ ದಾಟಿತ್ತು. ಆ ನಂತರ ಮತ್ತೆ ಚಿನ್ನ ಅದೇ ಸ್ಥಾನಕ್ಕೀಗ ಬಂದಿದ್ದು, ಸಾಗರೋತ್ತರ ದೇಶಗಳಲ್ಲಿ ಕೊಳ್ಳುವಿಕೆಯ ಭರಾಟೆಯೂ ಈ ಏರಿಕೆಗೆ ಇನ್ನಷ್ಟು ಪುಷ್ಠಿ ನೀಡಿದೆ.

ಬೆಳ್ಳಿ ಬೆಲೆಯೂ ಏರಿಕೆ ಕಂಡಿದ್ದು, ಪ್ರತಿ ಕೆಜಿಗೆ 565 ರೂಪಾಯಿ ಏರಿಕೆಯಾಗಿದ್ದು 28,165 ರೂಪಾಯಿಗಳು ದಾಖಲಾಗಿದೆ.

ಶುದ್ಧ ಚಿನ್ನ ಪ್ರತಿ ಹತ್ತು ಗ್ರಾಂಗೆ 495 ರೂಪಾಯಿಗಳ ಏರಿಕೆ ಕಂಡು 18,110 ರೂಪಾಯಿಗಳಿಗೆ ತಲುಪಿದೆ. ಆಭರಣ ಚಿನ್ನವೂ ಪ್ರತಿ ಹತ್ತು ಗ್ರಾಂಗೆ 495 ರೂ ಏರಿಕೆ ಕಂಡು 17,960 ರೂಪಾಯಿ ದಾಖಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಿನ್ನ, ಬೆಳ್ಳಿ, ಬೆಲೆ ಏರಿಕೆ, ಆಭರಣ