ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 10 ಪಿಎಸ್‌ಯು ಕಂಪನಿಗಳಿಗೆ ಕೇಂದ್ರದ ನೆರವು (HMT | PSU | Manmohan Singh)
Bookmark and Share Feedback Print
 
ಪ್ರತಿಷ್ಠಿತ ಎಚ್‌ಎಂಟಿ ಸಂಸ್ಥೆ ಸೇರಿದಂತೆ ಸರ್ಕಾರಿ ಸ್ವಾಮ್ಯದ ರೋಗಗ್ರಸ್ಥ 10 ಕಂಪನಿಗಳ ಉದ್ಯೋಗಿಗಳಿಗೆ ಸಂಬಳ ನೀಡಲು ಕೇಂದ್ರ ಸರ್ಕಾರ ಶುಕ್ರವಾರ ಒಟ್ಟು 67.72 ಕೋಟಿ ರೂಪಾಯಿಗಳ ಹಣ ಬಿಡುಗಡೆ ಮಾಡಲು ನಿರ್ಧರಿಸಿದೆ.

ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಹಿಂದೂಸ್ತಾನ್ ಕೇಬಲ್ಸ್, ಎಚ್ಎಂಟಿ, ಎಚ್ಎಂಟಿ ಬೇರಿಂಗ್ಸ್, ಎಚ್ಎಂಟಿ ವಾಚ್, ಎಚ್ಎಂಟಿ ಸಿಡಬ್ಲ್ಯು, ಹಿಂದೂಸ್ತಾನ್ ಫೋಟೋ ಫಿಲ್ಮ್ ತ್ರಿವೇಣಿ ಸ್ಟ್ರಕ್ಚರಲ್ಸ್, ತುಂಗಭದ್ರಾ ಸ್ಟೀಲ್ ಪ್ರೊಡಕ್ಟ್ಸ್, ನೆಪಾ ಹಾಗೂ ಸ್ಕೂಟರ್ಸ್ ಇಂಡಿಯಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಒಟ್ಟು 67.72 ಕೋಟಿ ರೂಪಾಯಿಗಳ ಹಣ ಬಿಡುಗಡೆ ಮಾಡಲು ನಿರ್ಧರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ