ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಯುಎಸ್ ಅಸಾಮಾನ್ಯ ಶೇರಿನ ಬಗ್ಗೆ ತನಿಖೆ: ಒಬಾಮಾ (Barack Obama | Wall Street | Dow Jones Industrial Average | America)
Bookmark and Share Feedback Print
 
ಅಮೆರಿಕಾ ಶೇರುಪೇಟೆಯಲ್ಲಿ ಉಂಟಾಗುತ್ತಿರುವ ಅಸಾಮಾನ್ಯ ಶೇರು ವಹಿವಾಟು ಕುರಿತಂತೆ ಶೀಘ್ರದಲ್ಲೇ ತನಿಖೆ ನಡೆಸಲಾಗುತ್ತದೆ ಎಂದು ಅಧ್ಯಕ್ಷ ಬರಾಕ್ ಒಬಾಮಾ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಹೂಡಿಕೆದಾರರನ್ನು ಕಾಪಾಡಲು ಹಾಗೂ ದೊಪ್ಪನೆ ಏರಿಳಿತವುಂಟಾಗುವ ಶೇರುಪೇಟೆಯನ್ನು ನಿಯಂತ್ರಣದಲ್ಲಿಡಲು ಕ್ರಮ ಕೈಗೊಳ್ಳಲಾಗಿದೆ.

ಶ್ವೇತಭವನದಲ್ಲಿ ಉದ್ಯೋಗ ಪ್ರಮಾಣವನ್ನು ಹೆಚ್ಚಿಸುವ ಕುರಿತಾದ ಹೇಳಿಕೆಯಿಂದ ನುಣುಚಿಕೊಂಡ ಒಬಾಮಾ, ವಾಲ್‌ಸ್ಟೀಟ್ ಮಾರುಕಟ್ಟೆಯ ಅಸಾಮಾನ್ಯ ವಹಿವಾಟಿನ ಬಗ್ಗೆ ತಾನು ಮಾತನಾಡಲು ಇಚ್ಛಿಸುತ್ತಿರುವುದಾಗಿ ತಿಳಿಸಿದರು.

ನಿಯಂತ್ರಣಾಧಿಕಾರಿಗಳು ಗುರುವಾರ ಮಾರುಕಟ್ಟೆಯಲ್ಲಿ ನಡೆದಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದು, ಹೂಡಿಕೆದಾರರನ್ನು ಇಂತಹ ಅಪಾಯದಿಂದ ಕಾಪಾಡಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾರ್ತನೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದವರು ಹೇಳಿದರು.

ಅಮೆರಿಕಾದ ಡೊ ಜೋನ್ಸ್ ಶೇರುಪೇಟೆಯಲ್ಲಿ ಗುರುವಾರ ವಹಿವಾಟು ಆರಂಭವಾದ 20 ನಿಮಿಷದಲ್ಲೇ 998.5 ಪಾಯಿಂಟ್ ಕುಸಿತ ಕಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ