ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2014ರಲ್ಲಿ ಭಾರತದ ರಫ್ತು ಪ್ರಮಾಣ ದ್ವಿಗುಣ: ಕೇಂದ್ರ (India | Government | exports | Anand Sharma)
Bookmark and Share Feedback Print
 
ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ರಫ್ತು ಪ್ರಮಾಣವನ್ನು 2014ರ ಅವಧಿಗೆ ದ್ವಿಗುಣಗೊಳಿಸಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಆನಂದ್ ಶರ್ಮಾ ಶುಕ್ರವಾರ ಹೇಳಿಕೆ ನೀಡಿದ್ದಾರೆ.

ಜಾಗತಿಕ ಆರ್ಥಿಕ ಹಿಂಜರಿತದ ನಂತರ ನಾವು ಪ್ರಬಲರಾಗಿ ಹೊರಹೊಮ್ಮಿದ್ದು, ಉತ್ತಮ ರೀತಿಯ ಬೆಳವಣಿಗೆ ಕಂಡುಬರುತ್ತಿದೆ. ಇದೇ ಪರಿಸ್ಥಿತಿಯನ್ನು ಮುಂದುವರಿಸುವ ಇರಾದೆಯನ್ನು ನಾವು ಹೊಂದಿದ್ದು, 2014ರ ಅವಧಿಗೆ ರಫ್ತು ಪ್ರಮಾಣ ದ್ವಿಗುಣವಾಗಲಿದೆ ಎಂದವರು ವರದಿಗಾರರಿಗೆ ತಿಳಿಸಿದರು.

ಜಾಗತಿಕ ವ್ಯಾಪಾರ ರಂಗದಲ್ಲಿ ನಮ್ಮ ಶೇರನ್ನು ದ್ವಿಗುಣಗೊಳಿಸಲು ನಿರ್ಧಿಷ್ಟ ಗುರಿಯನ್ನು ನಿಗದಿಪಡಿಸಿದ್ದೇವೆ. ಅದರಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಅಲ್ಲದೆ ಕಳೆದ ಆಗಸ್ಟ್ 28ರಂದು ಬಿಡುಗಡೆಗೊಂಡ ವಿದೇಶೀ ವ್ಯಾಪಾರ ನಿಯಮದಲ್ಲಿ ಉತ್ತೇಜನ ಹಾಗೂ ಹಲವು ಯೋಜನೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ