ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೇಶದ ಚಹಾ ಉತ್ಪಾದನೆ ಹಾಗೂ ರಫ್ತಿನಲ್ಲಿ ಏರಿಕೆ (tamil nadu | Tea Board | India | Karnataka)
Bookmark and Share Feedback Print
 
ವಿಶ್ವದಲ್ಲಿಯೇ ಅತೀ ಹೆಚ್ಚು ಟೀ ಉತ್ಪಾದಿಸುವ ರಾಷ್ಟ್ರ ಭಾರತ 2010ರ ಮಾರ್ಚ್ ತಿಂಗಳಲ್ಲಿ 49 ಮಿಲಿಯನ್ ಕೆ.ಜಿ. ಚಹಾ ಪುಡಿಯನ್ನು ಉತ್ಪಾದಿಸಿದೆ ಎಂದು ಚಹಾ ಮಂಡಳಿ ವರದಿ ತಿಳಿಸಿದೆ.

ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಚಹಾ ಉತ್ಪಾದನೆಯು 45 ಮಿಲಿಯನ್ ಕೆ.ಜಿ.ಗಳಾಗಿತ್ತು.

ಅದೇ ರೀತಿ 2010ರ ಮಾರ್ಚ್ ತಿಂಗಳ ದೇಶದ ಟೀ ರಫ್ತು ಪ್ರಮಾಣವು 17.69ಕ್ಕೆ ಏರಿಕೆಯಾಗಿದೆ. ಕಳೆದ ಬಾರಿ ಇದೇ ಅವಧಿಯಲ್ಲಿ 14.22 ಮಿಲಿಯನ್ ಕೆ.ಜಿ.ಗಳಾಗಿತ್ತು.

ದೇಶದ ಉತ್ತರ ಪೂರ್ವ ಪ್ರದೇಶಗಳು ಮಾರ್ಚ್ ತಿಂಗಳ ಟಿ ಉತ್ಪಾದನೆಯಲ್ಲಿ ಮುನ್ನಡೆ ಸಾಧಿಸಿವೆ. ಅಲ್ಲಿನ ಸಣ್ಣ ಬೆಳೆಗಾರರು ಕೂಡಾ ಚಹಾ ತೋಟಗಾರಿಕೆಯತ್ತ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದು, ಮುಂಬರುವ ತಿಂಗಳಲ್ಲಿಯೂ ಇದು ಮುಂದುವರಿಯುವ ವಿಶ್ವಾಸವಿದೆ ಎಂದು ಟೀ ಬೋರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ದಕ್ಷಿಣ ಹಾಗೂ ಉತ್ತರ ಭಾರತ ಚಹಾ ರಫ್ತಿನಲ್ಲಿಯೂ ಸಣ್ಣ ಪ್ರಮಾಣದ ಏರಿಕೆಯುಂಟಾಗಿದೆ ಎಂದು ವರದಿ ತಿಳಿಸಿದೆ.

ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯದಿಂದಲೂ ರಫ್ತಾಗುತ್ತಿರುವ ಚಹಾ ಬೆಳೆಯಲ್ಲಿ ಏರಿಕೆಯುಂಟಾಗಿದ್ದು, 17.69 ಮಿಲಿಯನ್ ಕೆ.ಜಿಗಳಿಂದ 19.17 ಮಿಲಿಯನ್ ಕೆ.ಜಿ.ಗೆ ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಹಾ, ಭಾರತ, ಕರ್ನಾಟಕ, ರಫ್ತು