ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆಪಲ್ ಸಂಸ್ಥೆಯ ವಿರುದ್ಧ ಮತ್ತೆ ದೂರು ದಾಖಲಿಸಿದ ನೋಕಿಯಾ (Nokia | Apple | iPad)
Bookmark and Share Feedback Print
 
ಪ್ರತಿಷ್ಠಿತ ಆಪಲ್ ಸಂಸ್ಥೆಯ ವಿರುದ್ಧ ಪ್ರತಿಸ್ಪರ್ಧಿ ನೋಕಿಯಾ ಸಂಸ್ಥೆ ಇದೀಗ ಮತ್ತೊಂದು ದೂರನ್ನು ದಾಖಲಿಸಿದೆ.

ಯುಎಸ್‌ನ ಜಿಲ್ಲಾ ನ್ಯಾಯಾಲಯದಲ್ಲಿ ದೂರು ಸಲ್ಲಿಸಿರುವ ನೋಕಿಯಾ ಸಂಸ್ಥೆ, ಆಪಲ್ ಸಂಸ್ಥೆ ತನ್ನ ಸಂಸ್ಥೆಯ ಪೇಟೆಂಟ್ ನಿಯಮಗಳನ್ನು ಗಾಳಿಗೆ ದೂರಿದ್ದು, ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಈ ಹಿಂದೆಯೇ ಆಪಲ್ ಸಂಸ್ಥೆ ತನ್ನ ವಿರುದ್ಧ ನೋಕಿಯಾ ದಾಖಲಿಸಿದ ದೂರಿಗೆ ಉತ್ತರಿಸಿದ್ದರೂ, ಮತ್ತೆ ನೋಕಿಯಾ ಸಂಸ್ಥೆ ತನ್ನ ದೂರನ್ನು ದಾಖಲಿಸಿದೆ. ಈ ದೂರು ಆಪಲ್‌ನ ಭಾರೀ ಚರ್ಚಿತ ಐ ಪ್ಯಾಡ್‌ಗೂ ಸಂಬಂಧಿಸಿದ್ದಾಗಿದೆ.

ಇದೇ ವೇಳೆ ಆಪಲ್ ಸಂಸ್ಥೆಯೂ ತೈವಾನ್‌ನ ಎಚ್‌ಟಿಸಿ ಕೋರ್ಪೋರೇಷನ್ ಸಂಸ್ಥೆಯ ವಿರುದ್ಧ ದೂರು ಸಲ್ಲಿಸಿದ್ದು ಇದು ತನ್ನ ಪೇಟೆಂಟ್ ನಿಯಮಗಳನ್ನು ಉಲ್ಲಂಘಿಸಿದೆ ಎಂದಿದೆ.

ಈ ನ್ಯಾಯಾಂಗ ಹೋರಾಟ ಇದೀಗ ಈ ಕಂಪನಿಗಳ ನಡುವೆ ಹೆಚ್ಚು ಸ್ಪರ್ಧೆ ಉಂಟು ಮಾಡಿದ್ದು, ಇದು ಉದ್ಯಮದಲ್ಲಿ ಸಾಕಷ್ಟು ಚರ್ಚೆಗೆ ಈಡು ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನೋಕಿಯಾ, ಆಪಲ್, ಮೊಬೈಲ್