ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ, ಬೆಳ್ಳಿ ಏರಿಕೆ (Gold | bullion | silver)
Bookmark and Share Feedback Print
 
ದಿನೇ ದಿನೇ ಏರಿಕೆಯತ್ತಲೇ ಸಾಗಿದ ಚಿನ್ನದ ಬೆಲೆ ಇದೀಗ ಕೊಂಚ ಇಳಿಕೆಯಾಗಿದೆ. ಪ್ರತಿ ಹತ್ತು ಗ್ರಾಂ ಚಿನ್ನದ ಬೆಲೆ 10 ರೂಪಾಯಿ ಇಳಿಕೆಯಾಗಿದ್ದು, 18,100 ರೂಪಾಯಿ ದಾಖಲಾಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಮಾತ್ರ ಏರಿಕೆ ಕಾಣುತ್ತಿದ್ದು, ಪ್ರತಿ ಕೆಜಿಗೆ 735 ರೂಪಾಯಿ ಏರಿಕೆಯಾಗಿದ್ದು 28,900 ರೂಪಾಯಿಗೆ ತಲುಪಿದೆ.

ಶುದ್ಧ ಚಿನ್ನ ಹಾಗೂ ಆಭರಣ ಚಿನ್ನ ಇದೀಗ ಪ್ರತಿ 10 ಗ್ರಾಂಗೆ 10 ರೂಪಾಯಿ ಇಳಿಕೆಯಾಗಿದ್ದು, ಕ್ರಮವಾಗಿ 18,100 ಹಾಗೂ 17,950ಕ್ಕೆ ತಲುಪಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ.0.07ರಷ್ಟು ಇಳಿಕೆಯಾಗಿದ್ದು 1,208 ಯುಎಸ್ ಡಾಲರ್‌ಗೆ ಇಳಿದಿದೆ. ಆದರೆ ಬೆಳ್ಳಿ ವ್ಯಾಪಾರ ದಿನೇ ದಿನೇ ವೃದ್ಧಿಸುತ್ತಿದ್ದು ಇದು ಏರಿಕೆಗೆ ಕಾರಣವಾಗಿದೆ. ಬೆಳ್ಳಿಯ ನಾಣ್ಯಗಳೂ ಪ್ರತಿ 100 ನಾಣ್ಯಗಳಿಗೆ ಕೂಡಾ 100ರೂಗಳಷ್ಟು ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಿನ್ನ, ಬೆಲೆ ಏರಿಕೆ, ಬೆಳ್ಳಿ