ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಮೆರಿಕಾ ಡಾಲರ್ ಎದುರು 40 ಪೈಸೆ ಹೆಚ್ಚಿಸಿಕೊಂಡ ರೂಪಾಯಿ (Rupee | US dollar | capital inflows | Forex)
Bookmark and Share Feedback Print
 
ವಿದೇಶಿ ನೂತನ ಬಂಡವಾಳದ ಒಳಹರಿವಿನ ಬೆಂಬಲ ಪಡೆದುಕೊಂಡಿರುವ ದೇಶೀಯ ಶೇರು ಮಾರುಕಟ್ಟೆಯ ದಿನದಾರಂಭದ ವಹಿವಾಟಿನ ಕಾರಣದಿಂದಾಗಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ವಿರುದ್ಧ ರೂಪಾಯಿ 40 ಪೈಸೆಗಳ ಮೌಲ್ಯ ಹೆಚ್ಚಿಸಿಕೊಂಡಿದೆ.

ಪ್ರತಿ ಡಾಲರ್ ಎದುರು 40 ಪೈಸೆಗಳನ್ನು ಹೆಚ್ಚಿಸಿಕೊಂಡಿರುವ ಫಾರೆಕ್ಸ್‌ನಲ್ಲಿ ಇಂದು ಬೆಳಿಗ್ಗೆ ರೂಪಾಯಿ ಮೌಲ್ಯ 45.08ರಲ್ಲಿತ್ತು. ಶುಕ್ರವಾರದ ವಹಿವಾಟಿನ ಅಂತ್ಯದಲ್ಲಿ ರೂಪಾಯಿಯು 18 ಪೈಸೆಗಳ ನಷ್ಟದೊಂದಿಗೆ 45.45/49ರಲ್ಲಿ ವ್ಯವಹಾರ ಮುಗಿಸಿತ್ತು.

ಶೇರು ಪೇಟೆಗೆ ವಿದೇಶಿ ಹಣದ ಹರಿವು ಹೆಚ್ಚಾಗಿರುವುದು ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಇತರ ಪ್ರಮುಖ ಕರೆನ್ಸಿಗಳೆದುರು ಅಮೆರಿಕನ್ ಡಾಲರ್ ಕುಸಿತ ಕಂಡಿರುವುದು ದೇಶೀಯ ರೂಪಾಯಿಯು ಅಮೆರಿಕನ್ ಡಾಲರ್ ವಿರುದ್ಧ ಮೇಲುಗೈ ಸಾಧಿಸಲು ಕಾರಣವಾಗಿದೆ ಎಂದು ಡೀಲರುಗಳು ಅಭಿಪ್ರಾಯಪಟ್ಟಿದ್ದಾರೆ.

ಅದೇ ಹೊತ್ತಿಗೆ ಇಂದಿನ ದಿನದಾರಂಭದ ವಹಿವಾಟಿನಲ್ಲಿ ಮುಂಬೈ ಶೇರು ಸಂವೇದಿ ಸೂಚ್ಯಂಕವು 260.06 ಅಂಕ ಅಥವಾ ಶೇ.1.55ರ ಹೆಚ್ಚಳವನ್ನು ಕಂಡಿದ್ದು, 17,029.17ಕ್ಕೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ