ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೇಶೀಯ ಕಾರು, ಬೈಕ್ ಮಾರಾಟದಲ್ಲಿ ಹೆಚ್ಚಳ (car sales | bikes | Domestic car | New Delhi | SIAM)
Bookmark and Share Feedback Print
 
ದೇಶೀಯ ನಿರ್ಮಿತ ಕಾರು ಮಾರಾಟದಲ್ಲಿ ಶೇ.39.48ರಷ್ಟು ಹೆಚ್ಚಳ ಕಂಡಿದ್ದು, ಏಪ್ರಿಲ್ ತಿಂಗಳಿನಲ್ಲಿ 1,43,976 ಕಾರುಗಳು ಮಾರಾಟವಾಗಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ 1,03,227ರಷ್ಟು ಕಾರು ಮಾರಾಟವಾಗಿತ್ತು.

ಸೊಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನ್ಯುಫ್ಯಾಕ್ಚರ್ಸ್ (ಎಸ್ಐಎಎಂ) ಭಾನುವಾರ ಬಿಡುಗಡೆ ಮಾಡಿರುವ ಅಂಕಿ-ಅಂಶದ ಪ್ರಕಾರ, ದೇಶದಲ್ಲಿ ಕಾರು ಮಾರಾಟವಲ್ಲದೇ, ಮೋಟಾರ್ ಬೈಕ್ ಮಾರಾಟದಲ್ಲಿಯೂ ಹೆಚ್ಚಳ ಕಂಡಿರುವುದಾಗಿ ತಿಳಿಸಿದೆ.

ಪ್ರಸಕ್ತ ಸಾಲಿನ ಏಪ್ರಿಲ್ ತಿಂಗಳಿನಲ್ಲಿ ಬೈಕ್ ಮಾರಾಟದಲ್ಲಿ ಶೇ.16.67ರಷ್ಟು ಹೆಚ್ಚಳ ಕಂಡಿದ್ದು, 6,56,119 ಬೈಕ್ ಮಾರಾಟವಾಗಿತ್ತು. ಅದೇ ರೀತಿ ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ 5,62, 349 ಬೈಕ್ ಮಾರಾಟವಾಗಿತ್ತು.

ಒಟ್ಟಾರೆ ಏಪ್ರಿಲ್ ತಿಂಗಳಿನಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ ಶೇ.22.06ರಷ್ಟು ಹೆಚ್ಚಳ ಕಂಡಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ 7,00, 987 ದ್ವಿಚಕ್ರ ವಾಹನ ಮಾರಾಟವಾಗಿದ್ದು, ಪ್ರಸಕ್ತ ಸಾಲಿನ ಏಪ್ರಿಲ್ ತಿಂಗಳಿನಲ್ಲಿ 8, 55, 670 ದ್ವಿಚಕ್ರ ವಾಹನ ಮಾರಾಟವಾಗಿ ಹೆಚ್ಚಳ ಕಂಡಿದೆ ಎಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ