ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಿಲಯನ್ಸ್‌ನಿಂದ ಮೂರು ತಿಂಗಳಲ್ಲಿ ಐಪಿಟಿವಿ ಸೇವೆ ಪ್ರಾರಂಭ (IPTV | Mumbai | Delhi | RCom | BSNL | DTH | MTNL)
Bookmark and Share Feedback Print
 
ದೇಶದ ಪ್ರಮುಖ ಮೊಬೈಲ್ ಸೇವಾ ಸಂಸ್ಥೆಯಾದ ರಿಲಯನ್ಸ್ ಕಮ್ಯೂನಿಕೇಶನ್ ಬಹು ನಿರೀಕ್ಷಿತ ಇಂಟರ್ನೆಟ್ ಪ್ರೋಟೋಕಾಲ್ ಟೆಲಿವಿಶನ್ (ಐಪಿಟಿವಿ) ಸೇವೆಯನ್ನು ಮುಂದಿನ ಮೂರು ತಿಂಗಳಲ್ಲಿ ದೆಹಲಿ ಮತ್ತು ಮುಂಬೈನಲ್ಲಿ ಪ್ರಾರಂಭಿಸುವುದಾಗಿ ಕಂಪನಿ ಹೇಳಿದೆ.

ಉದ್ದೇಶಿತ ಐಪಿಟಿವಿ ಸೇವೆಯನ್ನು ಪ್ರಾರಂಭದಲ್ಲಿ ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಮುಂದಿನ ಮೂರು ತಿಂಗಳಲ್ಲಿ ಪ್ರಾರಂಭಿಸಲಾಗುತ್ತಿದ್ದು, ಅದನ್ನು ಇತರ ಆರು ನಗರಗಳಿಗೆ ಶೀಘ್ರದಲ್ಲೇ ವಿಸ್ತರಿಸುವ ಯೋಜನೆಯನ್ನು ಹೊಂದಿದ್ದೇವೆ ಎಂದು ರಿಲಯನ್ಸ್ ಕಮ್ಯೂನಿಕೇಶನ್‌ನ ಡಿಟಿಎಚ್ ಮತ್ತು ಐಪಿಟಿವಿ ಸೇವೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜಯ್ ಬೆಹ್ಲ್ ತಿಳಿಸಿದ್ದಾರೆ.

ಸೆಟ್ ಟಾಪ್ ಬಾಕ್ಸ್ ಬಳಸಿ ನೆಟ್ ಮೂಲಕ ಮೂಲಕ ಸ್ವೀಕರಿಸುವ ವೀಡಿಯೊ ಸಿಗ್ನಲ್‌ಗಳನ್ನು ಬಳಸಿಕೊಂಡು ಐಪಿಟಿವಿ ಕಾರ್ಯನಿರ್ವಹಿಸುತ್ತದೆ ಮತ್ತು ಅದು ಟಿವಿ ವೀಕ್ಷಣೆಯನ್ನು ಇನ್ನಷ್ಟು ಸಂವಹನಕಾರಿಯಾಗಿ ಮಾಡುತ್ತದೆ. ಇದಲ್ಲದೇ ಚಲನಚಿತ್ರಗಳು ಮತ್ತು ಸಂಗೀತದಂತಹ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಪ್ರಾಂತೀಯ ವೀಡಿಯೊ ವಿಷಯಗಳ ಬೃಹತ್ ಲೈಬ್ರರಿಯನ್ನು ಐಪಿಟಿವಿ ಒದಗಿಸುತ್ತದೆ. ಇದಲ್ಲದೇ ಹೈ ಡಿಫಿನೇಶನ್ (ಹೆಚ್‌ಡಿ) ಮತ್ತು ರಿಲಯನ್ಸ್ ಚಾನೆಲ್‌ ಅನ್ನು ಒಳಗೊಂಡು ನೂರಕ್ಕೂ ಹೆಚ್ಚು ಟಿವಿ ಚಾನೆಲ್‌ಗಳನ್ನು ಗ್ರಾಹಕರು ವೀಕ್ಷಿಸಬಹುದು.

ಈ ಹಿಂದೆ ಐಪಿಟಿವಿ ಸೇವೆಯನ್ನು ಎಮ್‌ಟಿಎನ್‌ಎಲ್ ಹಾಗೂ ಬಿಎಸ್‌ಎನ್‌ಎಲ್ ಪ್ರಾರಂಭಿಸಿದ್ದವು. ಏಷ್ಯಾ ಫೆಸಿಫಿಕ್ ಪ್ರಾಂತ್ಯದಲ್ಲಿ ಐಪಿಟಿವಿ ಮಾರುಕಟ್ಟೆಯ ಆದಾಯವು 2013 ರೊಳಗೆ ಮೂರು ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ದಾಟಬಹುದೆಂದು ಅಂದಾಜಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ