ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚೀನಾದಲ್ಲಿ 360ಕ್ಕೂ ಹೆಚ್ಚು ಪತ್ರಿಕೆಗಳು ಕ್ಲೋಸ್! (Chinese newspapers | Global Times | Beijing | China)
Bookmark and Share Feedback Print
 
ಚೀನಾ ದೇಶದ 360 ಕ್ಕೂ ಅಂದರೆ ದೇಶದ ಒಟ್ಟು ಪ್ರಕಟಣೆಗಳ ಶೇಕಡಾ ಐದರಷ್ಟು ವೃತ್ತಪತ್ರಿಕೆಗಳು ಅಥವಾ ನಿಯತಕಾಲಿಕಗಳು ಮುಂದಿನ ಮೂರು ವರ್ಷಗಳಲ್ಲಿ ಪ್ರಕಟಣೆಯನ್ನು ನಿಲ್ಲಿಸಲಿವೆ!

ಚೀನಾದ ಮಾಧ್ಯಮ ಮತ್ತು ಪ್ರಕಟಣೆಯ ಸಾಮಾನ್ಯ ಆಡಳಿತವು ನಷ್ಟದಲ್ಲಿರುವ ಅಥವಾ ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವ ಪತ್ರಿಕೆಗಳನ್ನು ಮುಚ್ಚುವಂತಹ ಮಾರುಕಟ್ಟೆ ಆಧಾರಿತ ಸ್ಪರ್ಧಾತ್ಮಕ ಯೋಜನೆಯನ್ನು 2008ರಲ್ಲಿ ಜಾರಿಗೆ ತಂದ ನಂತರ 2009 ರಲ್ಲಿ ಸುಮಾರು 188 ಪತ್ರಿಕೆಗಳು ಮತ್ತು ನಿಯತಕಾಲಿಕಗಳು ಪ್ರಕಟಣೆಯನ್ನು ನಿಲ್ಲಿಸಿದ್ದವು.

ದಿವಾಳಿತನ ಮತ್ತು ಕಳಪೆ ನಿರ್ವಹಣೆ ಸಾಮರ್ಥ್ಯದ ಸಂಭಾವ್ಯ ನಿಯತಕಾಲಿಕೆಗಳನ್ನು ಮುಚ್ಚಲು ನಾವು ನಿರ್ಧರಿಸಿದ್ದೇವೆ, ಮಾರುಕಟ್ಟೆ ಹಿಂಪಡೆಯುವಿಕೆಯ ಯೋಜನೆಯು ಸ್ಪರ್ಧಾತ್ಮಕ ರೀತಿಯಲ್ಲಿ ಚೇತರಿಕೆಯ ಪ್ರಕಟಣೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಎಂದು ನಿರ್ವಹಣೆ ಮಹಾನಿರ್ದೇಶಕ ಲಿಯು ಬಿಂಜೀ ಹೇಳಿರುವುದನ್ನು ಉಲ್ಲೇಖಿಸಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಹಲವಾರು ವರ್ಷಗಳಿಂದ ಪತ್ರಿಕೆಗಳು ಲಾಭ ಅಥವಾ ನಷ್ಟದಲ್ಲಿರಲಿ ಅವುಗಳು ಮಾರುಕಟ್ಟೆಯಲ್ಲಿರಲು ಅವಕಾಶ ನೀಡಲಾಗಿತ್ತು. 2008ರಲ್ಲಿ ಪ್ರಾರಂಭಿಸಲಾದ ಪ್ರಾಯೋಗಿಕ ಕಾರ್ಯಕ್ರಮದಲ್ಲಿ, ಲಯೋಲಿಂಗ್ ಪ್ರಾಂತ್ಯದಲ್ಲಿ 12 ವಾರ್ತಾಪತ್ರಿಕೆಗಳು ಪ್ರಕಟಣೆಯನ್ನು ನಿಲ್ಲಿಸಿದ್ದರೆ, ಹೆಬೈ ಪ್ರಾಂತ್ಯದಲ್ಲಿ 3 ವಾರ್ತಾ ಪತ್ರಿಕೆಗಳು ಮುಚ್ಚಲ್ಪಟ್ಟಿದ್ದವು.

ಅಖಿಲ ಚೀನಾ ಪತ್ರಿಕೋದ್ಯಮಿಗಳ ಸಂಘಟನೆಯಿಂದ ನಡೆಸಲ್ಪಡುತ್ತಿದ್ದ ಚೀನಾ ಪ್ರೆಸ್ ಜರ್ನಲ್ ಪತ್ರಿಕೆಯು ಆಗಸ್ಟ್ 2009 ರಲ್ಲಿ ಕಳಪೆ ನಿರ್ವಹಣೆಯ ಕಾರಣದಿಂದ ಮುಚ್ಚಲ್ಪಟ್ಟು, ದೇಶದಲ್ಲಿ ಪ್ರಕಟಣೆಯನ್ನು ನಿಲ್ಲಿಸಿದ ಪ್ರಥಮ ಪತ್ರಿಕೆಯಾಗಿತ್ತು. ಅಂಕಿ-ಅಂಶಗಳ ಪ್ರಕಾರ ಚೀನಾ ದೇಶದಲ್ಲಿ 1943 ವೃತ್ತಪತ್ರಿಕೆಗಳು ಮತ್ತು ಸುಮಾರು 10000 ನಿಯತಕಾಲಿಕಗಳಿದ್ದವು ಎಂದು ಅಂಕಿ-ಅಂಶವೊಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ