ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವೊಡಾಫೋನ್ ಅಗ್ಗದ ಮೊಬೈಲ್ ದೆಹಲಿಯಲ್ಲಿ ಬಿಡುಗಡೆ (Vodafone Essar | mobile phone | VF 150 | Sanjay Warke)
Bookmark and Share Feedback Print
 
ಮೊಬೈಲ್ ಸೇವಾ ಪೂರೈಕೆದಾರ ವೊಡಾಫೋನ್ ಎಸ್ಸಾರ್ ತನ್ನ ಅಗ್ಗದ ಮೊಬೈಲನ್ನು ದೆಹಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಗ್ರಾಮೀಣ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡಿರುವ ಈ ಮೊಬೈಲ್ ಬೆಲೆ ಕೇವಲ 809 ರೂಪಾಯಿಗಳು.

ವೊಡಾಫೋನ್ 150 ಎಂದು ಹೆಸರಿಸಲಾಗಿರುವ ಈ ಮೊಬೈಲ್ ಫೋನ್ ದೇಶದ ಇತರ ಭಾಗಗಳಲ್ಲಿ ಇನ್ನು ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಮೊಬೈಲ್ ಕ್ರಾಂತಿಯ ಪರಿಣಾಮ ಹ್ಯಾಂಡ್‌ಸೆಟ್ ಒಂದರ ಬೆಲೆಯೂ ಜನತೆಗೆ ಪ್ರಮುಖವಾಗುತ್ತದೆ. ಹಾಗಾಗಿ ನಾವು ಇದೀಗ ಬಿಡುಗಡೆ ಮಾಡುತ್ತಿರುವ ಹ್ಯಾಂಡ್‌ಸೆಟ್ ಜನಜೀವನದ ಭಾಗವಾಗುವ ಭರವಸೆ ನಮ್ಮಲ್ಲಿದೆ ಎಂದು ವೊಡಾಫೋನ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸಂಜಯ್ ವಾರ್ಕೆ ತಿಳಿಸಿದ್ದಾರೆ.

ಬ್ರಿಟನ್ ಮೂಲದ ವೊಡಾಫೋನ್ ಸಮೂಹದ ಭಾರತೀಯ ಅಂಗಸಂಸ್ಥೆಯಾಗಿರುವ ವೊಡಾಫೋನ್ ಎಸ್ಸಾರ್ ಪ್ರಸಕ್ತ ದೇಶದಲ್ಲಿ 100.85 ಮಿಲಿಯನ್ ಗ್ರಾಹಕರನ್ನು ಹೊಂದಿದೆ.

70 ಗ್ರಾಂ ತೂಕವಿರುವ ಈ ಮೊಬೈಲ್ ಕಪ್ಪು-ಬಿಳುಪು ಪರದೆಯನ್ನು ಹೊಂದಿದೆ. ಸ್ಪೀಕರ್ ಫೋನ್ ಮತ್ತು ಟಾರ್ಚ್ ಸೌಲಭ್ಯವನ್ನೂ ಹೊಂದಿದೆ. ಇದು ಏಳು ಗಂಟೆಗಳ ಕಾಲ ನಿರಂತರ ಮಾತುಕತೆ ನಡೆಸುವಷ್ಟು ಬ್ಯಾಟರಿ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ತೆರಿಗೆಗಳೂ ಸೇರಿ ಕಂಪನಿ ನಿರ್ಧರಿಸಿರುವ ಮೌಲ್ಯ 799 ರೂಪಾಯಿಗಳು. ಆದರೆ ವಿವಿಧ ರಾಜ್ಯಗಳ ತೆರಿಗೆ ಸೇರಿ ಬೆಲೆ ಹೆಚ್ಚಾಗುತ್ತದೆ. ದೆಹಲಿಯಲ್ಲಿ 809 ರೂಪಾಯಿಗಳಿಗೆ ಲಭ್ಯ ಎಂದು ವೊಡಾಫೋನ್ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ