ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಾಮ್‌ಸುಂಗ್‌ನಿಂದ 20.3 ಬಿನ್‌ ಡಾಲರ್ ಹೂಡಿಕೆ (Samsung | Investment | Business)
Bookmark and Share Feedback Print
 
ದಕ್ಷಿಣ ಕೊರಿಯಾ ಮೂಲದ ಸಾಮ್‌ಸುಂಗ್ ಕಂಪೆನಿ,ಪರಿಸರ ಹಾಗೂ ಹೆಲ್ತ್‌ಕೇರ್ ಕೈಗಾರಿಕೋದ್ಯಮ ವಿಭಾಗದಲ್ಲಿ, 20.3 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ದೇಶದ ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸಾಮ್‌ಸುಂಗ್, ಸೋಲಾರ್ ಸೆಲ್ಸ್, ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳಿಗಾಗಿ ರಿಚಾರ್ಜೆಬಲ್ ಸೆಲ್ಸ್, ಎಲ್‌ಇಡಿ ಟೆಕ್ನಾಲಾಜೀಸ್, ಜೈವಿಕ ಉದ್ಯಮ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲಿರುವುದಾಗಿ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ನೂತನ ಕ್ಷೇತ್ರದಲ್ಲಿನ ಹೂಡಿಕೆಯಿಂದಾಗಿ,ಮುಂಬರುವ 2020ರಲ್ಲಿ ಸುಮಾರು 45,000 ಹುದ್ದೆಗಳು ಸೃಷ್ಟಿಯಾಗಲಿದ್ದು, ವಾರ್ಷಿಕವಾಗಿ 50 ಬಿಲಿಯನ್ ಡಾಲರ್ ಆದಾಯವಾಗುವ ನಿರೀಕ್ಷೆಯಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಮ್‌ಸುಂಗ್ ಕಂಪೆನಿಯ ಅಡಳಿತ ಮಂಡಳಿ ಸಭೆ ಸೇರಿ, ಇತರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಾಮ್ಸುಂಗ್, ಹೂಡಿಕೆ, ವಹಿವಾಟು