ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಒಂಬತ್ತು ರಾಷ್ಟ್ರಗಳಲ್ಲಿ ಐಪ್ಯಾಡ್‌ಗಳ ಮಾರಾಟ: ಆಪಲ್ (Apple | IPad | Market | United States | Sale)
Bookmark and Share Feedback Print
 
ಜಾಗತಿಕ ಕಂಪ್ಯೂಟರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಆಪಲ್ ಸಂಸ್ಥೆ, ಮೇ 28 ರಿಂದ ಒಂಬತ್ತು ಪ್ರಮುಖ ರಾಷ್ಟ್ರಗಳಲ್ಲಿ ಪೋರ್ಟೇಬಲ್ ಟ್ಯಾಬ್‌ಲೆಟ್ ಕಂಪ್ಯೂಟರ್‌ಗಳ ಮಾರಾಟವನ್ನು ಆರಂಭಿಸಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಬಹು ನಿರೀಕ್ಷಿತ ಆಪಲ್ ಟ್ಯಾಬ್‌ಲೆಟ್ ಕಂಪ್ಯೂಟರ್‌ಗಳ ಮಾರಾಟವನ್ನು, ಅಮೆರಿಕದಲ್ಲಿ ಕಳೆದ ಏಪ್ರಿಲ್ 3ರಿಂದ ಆರಂಭಿಸಿತ್ತು.ಆದರೆ ಕ್ಯಾಲಿಫೋರ್ನಿಯಾದಲ್ಲಿ ಗ್ರಾಹಕರ ಭಾರಿ ಒತ್ತಡವನ್ನು ಎದುರಿಸಬೇಕಾಗಿ ಬಂದಿದ್ದರಿಂದ, ಕಂಪ್ಯೂಟರ್‌ಗಳ ವಿತರಣೆಯಲ್ಲಿ ವಿಳಂಬವಾಗಿತ್ತು.

ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸ್ಪೇನ್ ಮತ್ತು ಸ್ವಿಟ್ಜರ್‌ಲೆಂಡ್‌ಗಳಲ್ಲಿ ಆಪಲ್ ಐಪ್ಯಾಡ್‌ಗಳನ್ನು ಮಾರಾಟವನ್ನು ಮಾಸಾಂತ್ಯಕ್ಕೆ ಆರಂಭಿಸಲಾಗುವುದು ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಆನ್‌ಲೈನ್ ಮುಖಾಂತರ ಖರೀದಿಸಬಯಸುವ ಒಂಬತ್ತು ರಾಷ್ಟ್ರಗಳ ಗ್ರಾಹಕರು, ಮೇ 10 ರಿಂದ ಪೂರ್ವ ಬೇಡಿಕೆ ಸಲ್ಲಿಸಬಹುದಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ ತಿಂಗಳ ಅವಧಿಯಲ್ಲಿ ಆಸ್ಟ್ರಿಯಾ, ಬೆಲ್ಜಿಯಂ, ಹಾಂಗ್‌ಕಾಂಗ್‌, ಐರ್ಲೆಂಡ್, ಲಕ್ಸಂಬರ್ಗ್, ಮೆಕ್ಸಿಕೊ, ನೆದರ್‌ಲೆಂಡ್, ನ್ಯೂಜಿಲೆಂಡ್ ಮತ್ತು ಸಿಂಗಾಪೂರ್‌ ದೇಶಗಳಲ್ಲಿ ಐಪ್ಯಾಡ್‌ಗಳ ಮಾರಾಟವನ್ನು ಆರಂಭಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ