ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಾರುಗಳ ಮಾರಾಟದಲ್ಲಿ ಶೇ.39ರಷ್ಟು ಹೆಚ್ಚಳ (Maruti|Car sales| Hyundai | Tata | Ford)
Bookmark and Share Feedback Print
 
ಮಾರುಕಟ್ಟೆಗಳಲ್ಲಿ ನೂತನ ಮಾಡೆಲ್‌ ಕಾರುಗಳ ಲಗ್ಗೆ ಹಾಗೂ ಆರ್ಥಿಕತೆ ಚೇತರಿಕೆಯಿಂದಾಗಿ,ಪ್ರಸಕ್ತ ಆರ್ಥಿಕ ವರ್ಷದ ಅವಧಿಯಲ್ಲಿ ಪ್ರಮುಖ ಕಂಪೆನಿಗಳ ಕಾರುಗಳ ಮಾರಾಟದಲ್ಲಿ ಶೇ.40ರಷ್ಟು ಏರಿಕೆಯಾಗಿದೆ.

ಸೂಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನುಫ್ಯಾಕ್ಚುರರ್ಸ್(ಸಿಯಾಮ್)ಪ್ರಕಾರ, ಏಪ್ರಿಲ್ ತಿಂಗಳ ಅವಧಿಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಕಾರುಗಳ ಮಾರಾಟದಲ್ಲಿ ಶೇ.39ರಷ್ಟು ಏರಿಕೆಯಾಗಿ 1.43ಲಕ್ಷ ಕಾರುಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳ ಅವಧಿಯಲ್ಲಿ 1.03 ಲಕ್ಷ ಕಾರುಗಳನ್ನು ಮಾರಾಟ ಮಾಡಲಾಗಿತ್ತು. ಮಾರುತಿ ,ಹುಂಡೈ, ಟಾಟಾ, ಫೋರ್ಡ್ ಮತ್ತು ಜನರಲ್ ಮೋಟಾರ್ಸ್ ಸೇರಿದಂತೆ ಒಟ್ಟು 16 ಕಾರು ತಯಾರಿಕೆ ಕಂಪೆನಿಗಳಲ್ಲಿ 14 ಕಂಪೆನಿಗಳ ಕಾರು ಮಾರಾಟದಲ್ಲಿ ಹೆಚ್ಚಳವಾಗಿದೆ.

ಸಣ್ಣ ಕಾರುಗಳ ಮಾಡೆಲ್‌ಗಳಲ್ಲಿ ಭಾರಿ ಬದಲಾವಣೆ ತಂದ ಫೋರ್ಡ್ಸ್ ಕಂಪೆನಿಯ ಫಿಗೊ, ಜನರಲ್ ಮೋಟಾರ್ಸ್‌ನ ಬೀಟ್ ಮತ್ತು ಮಾರುತಿಯ ನ್ಯೂ ವಾಗನಾರ್ ಕಾರುಗಳ ಮಾರಾಟದಲ್ಲಿ ಹೆಚ್ಚಳವಾಗಿದೆ.ಐಷಾರಾಮಿ ಕಾರುಗಳಾದ ಮರ್ಸಿಡೆಸ್ ಬೆಂಝ್ ಮತ್ತು ಬಿಎಂಡಬ್ಲೂ ಕಾರುಗಳ ಮಾರಾಟದಲ್ಲಿ ಕೂಡಾ ಹೆಚ್ಚಳವಾಗಿದೆ.

ಒಂದು ವೇಳೆ ದೇಶದ ಆರ್ಥಿಕ ವೃದ್ಧಿ ದರ ಶೇ.8-8.5ಕ್ಕೆ ಏರಿಕೆಯಾದಲ್ಲಿ ದೇಶದ ಕಾರು ತಯಾರಿಕೆ ಉದ್ಯಮ ಎರಡಂಕಿಗೆ ವೃದ್ಧಿಯಾಗಲಿದೆ ಎಂದು ಮಾರುತಿ ಸುಝುಕಿ ಕಂಪೆನಿಯ ಮುಖ್ಯಸ್ಥ ಆರ್‌.ಸಿ ಭಾರ್ಗವಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ