ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟೋಯೋಟಾಗೆ 1 ಬಿನ್‌ ಡಾಲರ್ ನಿವ್ವಳ ಲಾಭ (Toyota Motor Corp | Quarter profit | US customers| Q4)
Bookmark and Share Feedback Print
 
ವಾಹನೋದ್ಯಮ ತಯಾರಿಕೆ ಸಂಸ್ಥೆಯಾದ ಟೋಯೋಟಾ ಮೋಟಾರ್ ಕಾರ್ಪೋರೇಶನ್,ಕಳೆದ ವರ್ಷ ಎದುರಿಸಿದ ಬಿಕ್ಕಟ್ಟಿನ ಮಧ್ಯೆಯು ನಾಲ್ಕನೇ ತ್ರೈಮಾಸಿಕ ಅವಧಿಯ ನಿವ್ವಳ ಲಾಭದಲ್ಲಿ ಶೇ.90ರಷ್ಟು ಹೆಚ್ಚಳವಾಗಿ 1 ಬಿಲಿಯನ್ ಡಾಲರ್ ಲಾಭಗಳಿಸಿದೆ.

ಟೋಯೋಟಾ ಮೋಟಾರ್ಸ್ ಕಾರ್ಪೋರೇಶನ್ ಸಂಸ್ಥೆ, ಮುಂಬರುವ 2011ರ ಮಾರ್ಚ್ ಅಂತ್ಯಕ್ಕೆ ಶೇ.90ರಷ್ಟು ನಿವ್ವಳ ಲಾಭಗಳಿಸುವ ಸಾಧ್ಯತೆಗಳಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಳೆದ ಆರ್ಥಿಕ ವರ್ಷದ ಅವಧಿಯಲ್ಲಿ ಕಾರುಗಳ ಯಂತ್ರೋಪಕರಣ ದೋಷದಿಂದ ಸುಮಾರು 8 ಮಿಲಿಯನ್ ಕಾರುಗಳನ್ನು ವಾಪಸ್ ಕರೆಸಿಕೊಂಡಿರುವುದು ಸೇರಿದಂತೆ ಮಾರಾಟದಲ್ಲಿ ಕುಸಿತದಿಂದಾಗಿ ಸುಮಾರು 2 ಬಿಲಿಯನ್ ಡಾಲರ್ ನಿವ್ವಳ ನಷ್ಟ ಅನುಭವಿಸಿತ್ತು.

ಜನೆವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಕಾರ್ಯಾಚರಣೆಯ ಲಾಭ 1 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಕಳೆದ ವರ್ಷದ ಅವಧಿಯ ಜನೆವರಿ-ಮಾರ್ಚ್ ತಿಂಗಳ ಅವಧಿಯಲ್ಲಿ ತ್ರೈಮಾಸಿಕ ಲಾಭ 682.5 ಬಿಲಿಯನ್ ಯೆನ್‌ಗಳಿಗೆ ಕುಸಿದಿತ್ತು.
ಸಂಬಂಧಿತ ಮಾಹಿತಿ ಹುಡುಕಿ