ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಮೇಥಿಗೆ ಭೇಟಿ ನೀಡಿದ ಮೈಕ್ರೋಸಾಫ್ಟ್‌ ಮುಖ್ಯಸ್ಥ ಗೇಟ್ಸ್ (Rahul Gandhi, Bill Gates, IT hub, Amethi ,Congress)
Bookmark and Share Feedback Print
 
ಸೋನಿಯಾ ಪುತ್ರ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ಅಮೇಥಿ ಕ್ಷೇತ್ರಕ್ಕೆ ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಇಂದು ಭೇಟಿ ನೀಡಿದ್ದು,ಐಟಿ ನಗರವಾಗಿ ಅಭಿವೃದ್ಧಿಪಡಿಸುವ ವಾಗ್ದಾನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಸದ ರಾಹುಲ್ ಗಾಂಧಿಯೊಂದಿಗೆ ನಗರಕ್ಕೆ ಆಗಮಿಸಿದ ಬಿಲ್ ಗೇಟ್ಸ್, ಬಹದ್ದೂರ್‌ಪುರ್‌ ಗ್ರಾಮಕ್ಕೆ ತೆರಳಿ, ರಾಜೀವ ಗಾಂಧಿ ಮಹಿಳಾ ವಿಕಾಸ ಪರಿಯೋಜನಾ ಸ್ವಸಹಾಯ ಮಹಿಳಾ ಗುಂಪುಗಳೊಂದಿಗೆ ಚರ್ಚೆ ನಡೆಸಿದರು.

ಕಂಪ್ಯೂಟರ್ ಶಿಕ್ಷಣದ ಮಹತ್ವ ಕುರಿತಂತೆ ವಿವರಣೆ ನೀಡಿದ ಗೇಟ್ಸ್, ಅಮೇಥಿ ಹಾಗೂ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿರುವ ರಾಯ್ ಬರೇಲಿ ಕ್ಷೇತ್ರವನ್ನು ಮಾಹಿತಿ ತಂತ್ರಜ್ಞಾನ ನಗರವನ್ನಾಗಿ ಅಭಿವೃದ್ಧಿಪಡಿಸಲು ಅಗತ್ಯವಾದ ಎಲ್ಲ ನೆರವು ನೀಡುವುದಾಗಿ ಪ್ರಕಟಿಸಿದರು.

ರಾಹುಲ್ ಗಾಂಧಿ ಮತ್ತು ಬಿಲ್ ಗೇಟ್ಸ್ ಅಮೇಥಿ ನಗರದ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ