ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏರಿಂಡಿಯಾಗೆ ಬ್ಯಾಂಕ್‌ನಿಂದ 475 ಮಿನ್ ಡಾಲರ್ ಸಾಲ (Air India | Standard Chartered | Bank loan | Boeing 777)
Bookmark and Share Feedback Print
 
ದೇಶದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಏರ್‌ಇಂಡಿಯಾ,ಬೋಯಿಂಗ್ 777 ಮೂರು ವಿಮಾನಗಳ ಖರೀದಿಗಾಗಿ, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅಲ್ಪ ಅವಧಿಯ 475 ಮಿಲಿಯನ್ ಡಾಲರ್ ಸಾಲವನ್ನು ಪಡೆಯಲಿದೆ ಎಂದು ಏರ್‌ಇಂಡಿಯಾ ಮೂಲಗಳು ತಿಳಿಸಿವೆ.

ಉಭಯ ಕಂಪೆನಿಗಳು ಕಳೆದ ತಿಂಗಳು ಪರಸ್ಪರ ಒಪ್ಪಂದದ ನಿಯಮಗಳಿಗೆ ಹಾಗೂ ಷರತ್ತುಗಳಿಗೆ ಸಹಿ ಹಾಕಿವೆ ಎಂದಿ ಏರಿಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ಏರ್‌ಇಂಡಿಯಾದ ಮಾಲೀಕತ್ವವನ್ನು ಹೊಂದಿರುವ ನ್ಯಾಷನಲ್ ಏವಿಯೇಶನ್ ಕಂಪೆನಿ ಆಫ್ ಇಂಡಿಯಾ, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ಗೆ ಮೂರು ಬೋಯಿಂಗ್ ವಿಮಾನಗಳನ್ನು ಖರೀದಿಸಲು 475 ಮಿಲಿಯನ್ ಡಾಲರ್ ಸಾಲವನ್ನು ನೀಡುವಂತೆ ಮನವಿ ಪ್ರಸ್ತಾವನೆಯನ್ನು ಸಲ್ಲಿಸಿತ್ತು.

ಏರಿಂಡಿಯಾ ವಿಮಾನಯಾನ ಸಂಸ್ಥೆಯ ಅಡಳಿತ ಮಂಡಳಿ, ಕಳೆದ ತಿಂಗಳು ಸಭೆ ಸೇರಿ, ಸಾಲವನ್ನು ಪಡೆಯಲು ಅನುಮೋದನೆ ನೀಡಿದೆ ಎಂದು ಏರಿಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ