ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 56,000 ಕೋಟಿ ರೂ.ಗಳಿಗೆ ತಲುಪಿದ 3ಜಿ ಹರಾಜು (3G spectrum | Revenue | Government | BWA spectrum)
Bookmark and Share Feedback Print
 
ಬಹುನಿರೀಕ್ಷಿತ 3ಜಿ ತರಂಗಾಂತರಗಳ ಹರಾಜು 27ನೇ ದಿನದ ಅವಧಿಗೆ ನಿವ್ವಳ ಆದಾಯ 54,000 ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ ಎಂದು ಕೇಂದ್ರದ ಟೆಲಿಕಾಂ ಸಚಿವಾಲಯದ ಮೂಲಗಳು ತಿಳಿಸಿವೆ.

3ಜಿ ತರಂಗಾಂತರಗಳ ಹರಾಜಿನಿಂದ ಕನಿಷ್ಠ 56,631 ಕೋಟಿ ರೂಪಾಯಿಗಳಿಗೆ ತಲುಪಲಿದೆ ಎಂದು ಕೇಂದ್ರ ಸರಕಾರ ವಿಶ್ವಾಸ ವ್ಯಕ್ತಪಡಿಸಿದೆ.ಇದಕ್ಕಿಂತ ಮೊದಲು 3ಜಿ ತರಂಗಾಂತರಗಳ ಹರಾಜಿನಿಂದ 35,000 ಕೋಟಿ ರೂಪಾಯಿ ಆದಾಯವಾಗಲಿದೆ ಎಂದು ಸರಕಾರ ನಿರೀಕ್ಷಿಸಿತ್ತು.3ಜಿ ತರಂಗಾಂತರಗಳ ಹರಾಜಿನ ಮೀಸಲು ದರವನ್ನು ಸರಕಾರ 3,500 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಿದೆ.

ಮುಂಬೈ 2,558 ಕೋಟಿ ರೂಪಾಯಿಗಳಿಗೆ ತಲುಪುವ ಮೂಲಕ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ನಂತರ ದೆಹಲಿ 2551 ಕೋಟಿ ರೂಪಾಯಿಗಳಿಗೆ ತಲುಪಿ ಎರಡನೇ ಸ್ಥಾನದಲ್ಲಿದೆ. ಉತ್ತರಪ್ರದೇಶ (413 ಕೋಟಿ ರೂ) ಮತ್ತು ಬಿಹಾರ್ (141ಕೋಟಿ ರೂ) ನಂತರದ ಸ್ಥಾನಗಳನ್ನು ಪಡೆದಿವೆ.

3ಜಿ ತರಂಗಾಂತರಗಳ ಹರಾಜಿನಿಂದ ಕೇಂದ್ರ ಸರಕಾರಕ್ಕೆ 50,000-55,000 ಕೋಟಿ ರೂಪಾಯಿ ಆದಾಯವಾಗಲಿದೆ ಎಂದು ಕೇಂದ್ರ ಟೆಲಿಕಾಂ ಖಾತೆ ಸಚಿವ ಎ.ರಾಜಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ