ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.15ಕ್ಕೆ ತಲುಪಲಿರುವ ಕೈಗಾರಿಕೆ ವೃದ್ಧಿ ದರ (Industrial growth | Economists | IIP)
Bookmark and Share Feedback Print
 
ದೇಶದ ಕೈಗಾರಿಕೆ ವೃದ್ಧಿ ದರ ಮಾರ್ಚ್ ತಿಂಗಳಾಂತ್ಯಕ್ಕೆ ಶೇ.15-15.5ಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ನಿರೀಕ್ಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೈಗಾರಿಕೆ ಉತ್ಪಾದನಾ ಸೂಚ್ಯಂಕದನ್ವಯ ಕೈಗಾರಿಕೆ ವೃದ್ಧಿ ದರ ಮಾರ್ಚ್ ಅಂತ್ಯಕ್ಕೆ ಶೇ.15ಕ್ಕೆ ತಲುಪುವ ನಿರೀಕ್ಷೆಯಿದೆ. ಕಳೆದ 2009-10ರ ಅವಧಿಯಲ್ಲಿ ಕೈಗಾರಿಕೆ ವೃದ್ಧಿ ದರ ಕೇವಲ ಶೇ.2.4ಕ್ಕೆ ತಲುಪಿತ್ತು.

ಉತ್ಪಾದನೆ, ಬಂಡವಾಳ ಯಂತ್ರಗಳು ಮತ್ತು ಗೃಹೋಪಕರಣ ವಸ್ತುಗಳು ಬೇಡಿತೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೈಗಾರಿಕೆ ವೃದ್ಧಿ ದರ ಮಾರ್ಚ್ ಅಂತ್ಯಕ್ಕೆ ಶೇ.15ಕ್ಕೆ ತಲುಪಲಿದೆ ಎಂದು ಆರ್ಥಿಕ ತಜ್ಞ ಡಿ.ಕೆ.ಜೋಷಿ ತಿಳಿಸಿದ್ದಾರೆ.

ಕೈಗಾರಿಕೆ ವೃದ್ಧಿ ದರ ಮುಂಬರುವ ಮೇ ತಿಂಗಳವರೆಗೆ ಎರಡಂಕಿಯ ಚೇತರಿಕೆ ಮುಂದುವರಿಯಲಿದೆ. ನಂತರ ಅಲ್ಪ ಏರುಪೇರಾಗುವ ಸಾಧ್ಯತೆಗಳಿವೆ ಎಂದು ಎಕ್ಸಿಸ್ ಬ್ಯಾಂಕ್ ಮುಖ್ಯಸ್ಥರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ