ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅನಿಲ ಸರಬರಾಜು : ಪ್ರಧಾನಿ, ಅನಿಲ್ ಅಂಬಾನಿ ಮಾತುಕತೆ (Anil Ambani | Manmohan Singh | Mukesh Ambani| RIL)
Bookmark and Share Feedback Print
 
ದೇಶದ ಪ್ರಮುಖ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್‌ನ ಅನಿಲ್ ಧೀರುಭಾಯಿ ಅಂಬಾನಿ,ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಕೆಲ ಕಾಲ ಚರ್ಚಿಸಿದರು ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.

ಅನಿಲ್ ಅಂಬಾನಿ ಸಂಚಾಲಿತ ರಿಲಯನ್ಸ್ ನ್ಯಾಚುರಲ್ ರಿಸೊರ್ಸೆಸ್ ಲಿಮಿಟೆಡ್ ವಿದ್ಯುತ್ ಘಟಕಕ್ಕೆ, ಸಹೋದರ ಮುಕೇಶ್ ಸಂಚಾಲಿತ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಘಟಕದಿಂದ ಅನಿಲ ಮಾರಾಟ ವಿವಾದದ ಪ್ರಕರಣದಲ್ಲಿ ಸೋಲನುಭವಿಸಿದ ನಂತರ ಅನಿಲ್ ಅಂಬಾನಿ ಪ್ರಧಾನಿಯವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಿಲ ರಾಷ್ಟ್ರದ ಆಸ್ತಿಯಾಗಿದ್ದು, ದರ ನಿಗದಿ ಮತ್ತು ಸರಬರಾಜು ಕುರಿತಂತೆ ನಿರ್ಧರಿಸುವ ಹಕ್ಕು ಸರಕಾರಕ್ಕಿದೆ ಎಂದು ಅಪೆಕ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಸರಕಾರ ನಿಗದಿಪಡಿಸಿದ ಅನಿಲ ದರ ತುಂಬಾ ಕಡಿಮೆಯಾಗಿದ್ದು, ಅನಿಲ್ ಅಂಬಾನಿ ಸಂಚಾಲಿತ ವಿದ್ಯುತ್ ಘಟಕಕ್ಕೆ ಅನಿಲ ಸರಬರಾಜು ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಮುಕೇಶ್ ಅಂಬಾನಿ ನ್ಯಾಯಾಲಯದಲ್ಲಿ ವಾದಿಸಿದ್ದರು.

ಮುಕೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಸಹೋದರರು, ಆರು ವಾರಗಳ ಅವಧಿಯಲ್ಲಿ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ